ADVERTISEMENT

ಜನರ ದಾರಿ ತಪ್ಪಿಸುತ್ತಿರುವ ಶಾಸಕ ನೇಮರಾಜ ನಾಯ್ಕ: ಆರೋಪ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 14:38 IST
Last Updated 9 ಅಕ್ಟೋಬರ್ 2024, 14:38 IST
<div class="paragraphs"><p>ನೇಮರಾಜ ನಾಯ್ಕ</p></div>

ನೇಮರಾಜ ನಾಯ್ಕ

   

ಮರಿಯಮ್ಮನಹಳ್ಳಿ: ‘ಶಾಸಕ ನೇಮರಾಜ ನಾಯ್ಕ ಅವರು ಈ ಸರ್ಕಾರ ದಿವಾಳಿಯಾಗಿದ್ದು, ಯಾವುದೇ ಅನುದಾನ ನೀಡುತ್ತಿಲ್ಲ ಎಂದು ಪದೇ ಪದೇ ದೂರುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ನಡೆಸುತ್ತಿರುವ ಕಾಮಗಾರಿಗಳಿಗೆ ಬಂದ ಅನುದಾನ ಎಲ್ಲಿಯದು’ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಸದಸ್ಯ ಪೋತಲಕಟ್ಟೆಯ ಡಿ.ದೇವರಾಜ್ ಪ್ರಶ್ನಿಸಿದರು.

ಪಟ್ಟಣದಲ್ಲಿ ಈಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇವರು ಸರ್ಕಾರದ ಅನುದಾನದಲ್ಲಿಯೇ ಹೋಬಳಿ ವ್ಯಾಪ್ತಿಯ 13 ಗ್ರಾಮಗಳಲ್ಲಿ ತಲಾ ₹50ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದ್ದಾರೆ. ಸುಳ್ಳು ಹೇಳುತ್ತಾ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಕಾಮಗಾರಿಗಳು ಯಾವ ಇಲಾಖೆಗೆ ಸೇರಿದ್ದು ಎಂಬ ಮಾಹಿತಿ ಫಲಕವನ್ನೇ ಹಾಕದೆ ಕೆಲಸ ಮಾಡುತ್ತಿರುವುದು ಆಕ್ಷೇಪಾರ್ಹವಾಗಿದ್ದು, ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಕಮಿಷನ್ ಆಸೆಗೆ ಬೆಂಗಳೂರಿನ ಕಂಪನಿಗೆ ಗುತ್ತಿಗೆ ನೀಡಿದ್ದಾರೆ ಎಂದು’ ಅವರು ದೂರಿದರು.

‘ಕ್ಷೇತ್ರದಲ್ಲಿ ನೇಮರಾಜ ನಾಯ್ಕ ಶಾಸಕರೇ ಅವರಾ ಅಥವಾ ಅವರ ಆಪ್ತ ಸಹಾಯಕ ದೊಡ್ಡಬಸಪ್ಪ ರೆಡ್ಡಿ ಅವರೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ’ ಎಂದು ಆರೋಪಿಸಿದರು.

ಚಿಲಕನಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಹನುಮಂತಪ್ಪ ಮಾತನಾಡಿ, ‘ಶಾಸಕರು ಹೋಬಳಿ ವ್ಯಾಪ್ತಿಯ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಸ್ಥಳೀಯ ಆಡಳಿತದ ಗಮನಕ್ಕೂ ತರದೇ ಕಡೆಗಣಿಸಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುತ್ತದೆ’ ಎಂದರು.

ಸದಸ್ಯ ಶಂಕರ್ ನಾಯ್ಕ ಮಾತನಾಡಿದರು. ಸದಸ್ಯರಾದ ಬಸವರಾಜ್, ತಾಯಪ್ಪ, ಲಾಲುನಾಯ್ಕ, ಲೋಕ್ಯಾನಾಯ್ಕ, ತಿಪ್ಪಣ್ಣ, ಮುಖಂಡರಾದ ಬೋಸಪ್ಪ ಸತೀಶ್, ಕಣೀವೆಪ್ಪ ಶರಣಪ್ಪ, ಸೋಮಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.