ಹೊಸಪೇಟೆ (ವಿಜಯನಗರ ಜಿಲ್ಲೆ): ನಗರದ ನಂಜನಗೂಡು ರಾಘವೇಂದ್ರ ಸ್ವಾಮಿ ಮಠಕ್ಕೆ ಸೇರಿದ ಅಭಯಹಸ್ತ ಪಂಚಮುಖಿ ಪ್ರಾಣದೇವರ ಪುನರ್ ಪ್ರತಿಷ್ಠಾಪನೆ ಸೋಮವಾರ ಮಂತ್ರಾಲಯದಸುಬುಧೇಂದ್ರ ತೀರ್ಥರು ನೆರವೇರಿಸಿದರು.
ದೇವಸ್ಥಾನದಲ್ಲಿ ಬೆಳಿಗ್ಗೆ ನೂತನ ಕಟ್ಟಡ ಉದ್ಘಾಟಿಸಿ ಬಳಿಕ ಆಂಜನೇಯ, ವಿಘ್ನೇಶ್ವರ, ಪುರಂದರ ದಾಸರ ಪುನರ್ ಪ್ರತಿಷ್ಠಾಪನೆ ಮಾಡಿದರು. ನಂತರ ಅಭಿಷೇಕ, ಅಲಂಕಾರ ನೆರವೇರಿಸಲಾಯಿತು. ದೇವಸ್ಥಾನದ ಗೋಪುರದಲ್ಲಿ ಕುಂಭ ಪ್ರತಿಷ್ಠಾಪನೆ ಮಾಡಿದರು.
ಮೂಲರಾಮ ದೇವರ ಸಂಸ್ಥಾನ ಪೂಜೆ ನೆರವೇರಿಸಿ ಭಕ್ತರಿಗೆ ಫಲಮಂತ್ರಾಕ್ಷತೆ ನೀಡಿದರು.
ಇದಕ್ಕೂ ಮುನ್ನ ನಗರದ ಗಾಂಧಿ ಕಾಲೊನಿ ರಾಯರ ಮಠದಲ್ಲಿ ಭಕ್ತರಿಗೆ ತಪ್ತ ಮುದ್ರ ಧಾರಣೆ ಮಾಡಿದರು. ಶ್ರೀಮಠದ ವಿಚಾರಣಕರ್ತರಾದ ನರಸಿಂಹ ಮೂರ್ತಿ, ಗುರುರಾಜ್ ದಿಗ್ಗಾವಿ, ಎಲೆಮಂಚಾಲೆ, ಶ್ರೀನಿವಾಸ ರಾವ್, ಪತ್ತಿಕೊಂಡ ಕುಮಾರಸ್ವಾಮಿ, ವೈ. ರಾಘವೇಂದ್ರ ಶೆಟ್ಟಿ, ಮತ್ತಿಹಳ್ಳಿ ಜಯಶ್ರೀ, ಎಸ್.ಕೆ.ವಿ. ಆಚಾರ್ಯ, ಬೂದಿಹಾಳ್ ಪ್ರಹ್ಲಾದ್ ರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.