ಹೊಸಪೇಟೆ (ವಿಜಯನಗರ): ಕೆಲಸದಿಂದ ನಿವೃತ್ತರಾದ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಹಮತ್ ತರೀಕೆರೆ ಅವರಿಗೆ ಗುರುವಾರ ವಿಶ್ವವಿದ್ಯಾಲಯದಲ್ಲಿ ಬೀಳ್ಕೊಡಲಾಯಿತು.
ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ (ಐಕ್ಯುಎಸಿ) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಸ.ಚಿ. ರಮೇಶ ಅವರು ರಹಮತ್ ತರೀಕೆರೆ ಅವರಿಗೆ ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಟ್ಟರು.
‘ರಹಮತ್ ತರೀಕೆರೆ ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಕೊಟ್ಟ ಕೊಡುಗೆ ಅಷ್ಟಿಷ್ಟಲ್ಲ. ನಾಡಿನ ಹಲವೆಡೆ ಓಡಾಡಿ, ಅನೇಕ ವಿಷಯಗಳನ್ನು ದಾಖಲಿಸಿ, ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ನಿವೃತ್ತಿ ಜೀವನ ಸಂತೋಷದಾಯಕವಾಗಿರಲಿ. ಇನ್ನಷ್ಟು ಬರಹಗಳು ಅವರಿಂದ ಹೊರಬರಲಿ’ ಎಂದು ರಮೇಶ ಹೇಳಿದರು.
ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ, ಐಕ್ಯುಎಸಿ ನಿರ್ದೇಶಕ ಎ. ಮೋಹನ ಕುಂಟಾರ್, ವಿಜ್ಞಾನ ನಿಕಾಯದ ಡೀನ್ ಮಾಧವ ಪೆರಾಜೆ, ಹಣಕಾಸು ಅಧಿಕಾರಿ ರಮೇಶ ನಾಯಕ, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಚಿನ್ನಸ್ವಾಮಿ ಸೋಸಲೆ, ಉಪಕುಲಸಚಿವರಾದ ಎಸ್.ವೈ. ಸೋಮಶೇಖರ್, ಎ. ವೆಂಕಟೇಶ್, ಸಹಾಯಕ ಕುಲಸಚಿವ ಗುರುಬಸಪ್ಪ, ಸಂಶೋಧನಾ ವಿದ್ಯಾರ್ಥಿ ಮಲ್ಲಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.