ADVERTISEMENT

ಉತ್ತಮ ಮಳೆ: ತುಂಗಭದ್ರಾ ಜಲಾಶಯದಿಂದ 82 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 10:08 IST
Last Updated 13 ಅಕ್ಟೋಬರ್ 2024, 10:08 IST
   

ಹೊಸಪೇಟೆ (ವಿಜಯನಗರ): ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ 84,504 ಕ್ಯುಸೆಕ್‌ನಷ್ಟಿದ್ದು, 82,504 ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಈ ಪೈಕಿ ಸುಮಾರು 11 ಸಾವಿರ ಕ್ಯುಸೆಕ್‌ನಷ್ಟು ನೀರು ಕಾಲುವೆಗಳಿಗೆ ಹರಿಯುತ್ತಿದ್ದು, 71 ಸಾವಿರ ಕ್ಯುಸೆಕ್‌ನಷ್ಟು ನೀರು 20 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ಹರಿಯುತ್ತಿದೆ.

ತುಂಗಭದ್ರಾ ಮಂಡಳಿ ಶನಿವಾರ ಮೊದಲಿಗೆ 18 ಗೇಟ್‌ಗಳನ್ನು ತೆರೆದಿತ್ತು. ಬಳಿಕ ಇನ್ನೂ ಎರಡು ಗೇಟ್‌ಗಳನ್ನು ತೆರೆಯುವ ಮೂಲಕ ಅಧಿಕ ನೀರು ಹರಿಸುವ ಕ್ರಮ ಕೈಗೊಂಡಿತು. ಒಳಹರಿವು ಪ್ರಮಾಣ ಹೆಚ್ಚಾದರೆ 1 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ಹೊರಬಿಡುವ ಸಾಧ್ಯತೆ ಇದೆ ಎಂದು ಮಂಡಳಿ ಎಚ್ಚರಿಸಿದೆ.

ADVERTISEMENT

ಉತ್ತಮ ಮಳೆ: ಹೊಸಪೇಟೆ ಸುತ್ತಮುತ್ತ ಹಾಗೂ ಜಿಲ್ಲೆಯ ಕೆಲವೆಡೆ ಶನಿವಾರ ರಾತ್ರಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಭಾಗದಲ್ಲಿ ಅಧಿಕ ಮಳೆಯಿಂದಾಗಿ ಮೆಕ್ಕಜೋಳದ ತೆನೆಗಳಲ್ಲಿ ಗೇಣುದ್ದದ ಬೇರುಗಳು ಮೂಡಿದ್ದು, ಗಟ್ಟಿ ಕಾಳುಗಳೇ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.