ADVERTISEMENT

‘ಸಂಪಾಯಿತಲೇ ಪರಾಕ್’: 7 ಲಕ್ಷಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಮೈಲಾರನ ಕಾರ್ಣಿಕ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 13:11 IST
Last Updated 26 ಫೆಬ್ರುವರಿ 2024, 13:11 IST
   

ಮೈಲಾರ (ವಿಜಯನಗರ ಜಿಲ್ಲೆ): 'ಸಂಪಾಯಿತಲೇ ಪರಾಕ್' ಎಂದು ಕಾರ್ಣಿಕ ನುಡಿಯುವ ಮೂಲಕ ಮೈಲಾರದ ಕಾರ್ಣಿಕೋತ್ಸವ ಸೋಮವಾರ ಸಂಜೆ ಇಲ್ಲಿ ಕೊನೆಗೊಂಡಿತು.

ಏಳು ಲಕ್ಷಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಬಿಲ್ಲನ್ನು ಏರಿದ ಗೊರವಯ್ಯ ರಾಮಣ್ಣ ಅವರು ಇಷ್ಟೇ ಮಾತನ್ನು ಆಡಿ ಕೆಳಗೆ ಜಿಗಿದಾಗ ಹರ್ಷೋದ್ಗಾರ ಮೊಳಗಿತು.

ಬರಗಾಲದಿಂದ ಕಂಗೆಟ್ಟಿರುವ ನಾಡಿಗೆ ಈ ಬಾರಿ ಮಳೆ, ಬೆಳೆ ಚೆನ್ನಾಗಿ ಆಗಲಿದೆ, ನಾಡು ಸುಭಿಕ್ಷವಾಗಲಿದೆ ಎಂದು ಗೊರವಯ್ಯನ ಭವಿಷ್ಯವಾಣಿಯನ್ನು ವಿಶ್ಲೇಷಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.