ADVERTISEMENT

ಸಿಕಂದರಾಬಾದ್‌- ವಾಸ್ಕೋ- ಡ- ಗಾಮಾ ರೈಲು ಸಂಚಾರ ಅ,9 ರಿಂದ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 15:21 IST
Last Updated 7 ಅಕ್ಟೋಬರ್ 2024, 15:21 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಹೊಸಪೇಟೆ(ವಿಜಯನಗರ): ಹೊಸಪೇಟೆ ಮಾರ್ಗವಾಗಿ ಸಿಕಂದರಾಬಾದ್- ವಾಸ್ಕೋ-ಡ-ಗಾಮಾ (ಗೋವಾ) ನಡುವೆ ನೂತನ ರೈಲು ಸಂಚಾರ ಬುಧವಾರದಿಂದ (ಅ.9) ಆರಂಭವಾಗಲಿದೆ.

ADVERTISEMENT

ಈ ರೈಲು (17039) ವಾರದಲ್ಲಿ ಪ್ರತಿ ಬುಧವಾರ ಮತ್ತು ಶುಕ್ರವಾರದಂದು ಸಿಕಂದರಾಬಾದ್ ನಿಲ್ದಾಣದಿಂದ ಬೆಳಿಗ್ಗೆ 10 ಗಂಟೆಗೆ ನಿರ್ಗಮಿಸಿ ಕಾಚಿಗೂಡ, ಜೆಡ್ಚರ್ಲ, ಗದ್ವಾಲ್, ಕರ್ನೂಲ್ ಸಿಟಿ, ಧೋನ್, ಗುಂತಕಲ್, ಬಳ್ಳಾರಿ ಮಾರ್ಗವಾಗಿ ಹೊಸಪೇಟೆಗೆ ರಾತ್ರಿ 7.50ಕ್ಕೆ ಆಗಮಿಸಲಿದೆ. ನಂತರ ಕೊಪ್ಪಳ, ಗದಗ ಮೂಲಕ ಹುಬ್ಬಳ್ಳಿಗೆ ರಾತ್ರಿ 10.50ಕ್ಕೆ ತಲುಪಿ, ಧಾರವಾಡ, ಲೋಂಡಾ, ಮಡಗಾಂವ ಮಾರ್ಗವಾಗಿ ವಾಸ್ಕೋ-ಡ-ಗಾಮಾ ನಿಲ್ದಾಣವನ್ನು ಮರುದಿನ ಬೆಳಿಗ್ಗೆ 5.45ಕ್ಕೆ ತಲುಪಲಿದೆ.

ವಾಸ್ಕೋ-ಡ-ಗಾಮಾ ರೈಲು (17040) ಪ್ರತಿ ಗುರುವಾರ ಮತ್ತು ಶನಿವಾರದಂದು ಬೆಳಿಗ್ಗೆ 9 ಗಂಟೆಗೆ ನಿರ್ಗಮಿಸಿ ಅದೇ ಮಾರ್ಗವಾಗಿ ಹೊಸಪೇಟೆಗೆ ಸಂಜೆ 5 ಗಂಟೆಗೆ ಆಗಮಿಸಲಿದೆ. ನಂತರ ಬಳ್ಳಾರಿ, ಗುಂತಕಲ್ ಮಾರ್ಗವಾಗಿ ಮರುದಿನ ಮುಂಜಾನೆ 6.20ಕ್ಕೆ ಸಿಕಂದರಾಬಾದ್ ನಿಲ್ದಾಣ ತಲುಪಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಈವರೆಗೂ ಸಿಕಂದರಾಬಾದ್ ಮತ್ತು ಗೋವಾ ನಡುವೆ ನೇರ ಹಾಗೂ ಪ್ರತ್ಯೇಕ ಪ್ರಯಾಣಿಕರ ರೈಲಿನ ವ್ಯವಸ್ಥೆ ಇರಲಿಲ್ಲ. ಈ ನಗರಗಳ ನಡುವೆ ಸಂಚರಿಸುವ ಪ್ರಯಾಣಿಕರು ಗುಂತಕಲ್ ನಿಲ್ದಾಣದಲ್ಲಿ ರೈಲು ಬದಲಿಸಬೇಕಿತ್ತು. ಈಗ ನೇರ ಸಂಪರ್ಕ ಕಲ್ಪಿಸಿರುವುದರಿಂದ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಹಾಗೂ ಗೋವಾ ರಾಜ್ಯಗಳ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳು ವೃದ್ದಿಯಾಗುತ್ತವೆ. ಜೊತೆಗೆ ಪ್ರಯಾಣಿಕರ ಸಂಚಾರ ಅವಧಿ ಕಡಿಮೆಯಾಗುತ್ತದೆ ಎಂದು ವಿಜಯನಗರ ರೈಲ್ವೆ ಅಭಿವೃದ್ದಿ ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡುತಿನಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.