ADVERTISEMENT

ಕೊಟ್ಟೂರು | ಶಾಲಾ ಬಸ್‌ಗೆ ಬೆಂಕಿ, ವಿದ್ಯಾರ್ಥಿಗಳು ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 5:34 IST
Last Updated 15 ಜೂನ್ 2023, 5:34 IST
   

ಕೊಟ್ಟೂರು (ವಿಜಯನಗರ ಜಿಲ್ಲೆ): ಇಲ್ಲಿಗೆ ಸಮೀಪದ ಕೆ.ಅಯ್ಯನಹಳ್ಳಿ ಗ್ರಾಮದ ಬಳಿ ಗುರುವಾರ ಖಾಸಗಿ ಶಾಲಾ ಬಸ್‌ಗೆ ಬೆಂಕಿ ಹತ್ತಿಕೊಂಡಿದ್ದು, ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ.

ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬಸ್‌ಗೆ ಬೆಂಕಿ ಹತ್ತಿಕೊಂಡಿರಬೇಕು ಎಂದು ಶಂಕಿಸಲಾಗಿದೆ.

ಹೊಗೆ ಕಾಣಿಸಿಕೊಂಡ ತಕ್ಷಣ ಚಾಲಕ ಮತ್ತು ಸಿಬ್ಬಂದಿ ವಿದ್ಯಾರ್ಥಿಗಳನ್ನು ಬಸ್‌ನಿಂದ ಕೆಳಕ್ಕೆ ಇಳಿಸಿದರು. ಹೀಗಾಗಿ ಯಾವುದೇ ಅಪಾಯವಾಗಲಿಲ್ಲ. 

ADVERTISEMENT

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು,, ಕೊಟ್ಟೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

'ಈ ಬಸ್ ತರಳುಬಾಳು ವಿದ್ಯಾಸಂಸ್ಥೆಗೆ ಸೇರಿರುವ ಹುಣಸಿಕಟ್ಟೆ ಕ್ರಾಸ್‌ನ ತರಳಬಾಳು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಸೇರಿದ್ದಾಗಿತ್ತು. ಬಸ್‌ನಲ್ಲಿ 45 ಮಕ್ಕಳು ಸೇರಿದಂತೆ 3 ಜನ ಶಿಕ್ಷಕರು ಹಾಗೂ ಬಸ್ ಸಹಾಯಕ, ಚಾಲಕ ಒಳಗೊಂಡಂತೆ 50 ಜನರಿದ್ದರು' ಎಂದು ಕೂಡ್ಲಿಗಿಯ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ್ ತಿಳಿಸಿದ್ದಾರೆ.

'ದುರಂತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದು, ಸಿಬ್ಬಂದಿ ಸೇರಿದಂತೆ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಚಾಲಕನ ಮುಂಜಾಗ್ರತೆ ಹಾಗೂ ಚಾಣಾಕ್ಷತನದಿಂದ ಶಾರ್ಟ್ ಸರ್ಕ್ಯೂಟ್ ಆರಂಭದಲ್ಲಿ ಎಲ್ಲಾ ಮಕ್ಕಳನ್ನು ಕೆಳಗಿಳಿಸಿ ಮರದ ಕೆಳಗೆ ಕುಳ್ಳಿರಿಸಲಾಗಿತ್ತು. ಪುನಃ ಎಲ್ಲ ಮಕ್ಕಳನ್ನು ಈ ಸಂಸ್ಥೆಯ ಇನ್ನೊಂದು ಬಸ್ಸಿನಲ್ಲಿ ತಮ್ಮ ತಮ್ಮ ಊರುಗಳಿಗೆ ವಾಪಸ್ ಕಳುಹಿಸಲಾಯಿತು' ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.