ADVERTISEMENT

ವಿಜಯನಗರ | ‘ನೀರಿನ ಗಂಡ’ ಮೂಕಿ ಚಿತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಮೇ 2024, 14:52 IST
Last Updated 12 ಮೇ 2024, 14:52 IST
ಕಿರುಚಿತ್ರವನ್ನು ಬಿಡುಗಡೆಗೊಳಿಸಿದ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
ಕಿರುಚಿತ್ರವನ್ನು ಬಿಡುಗಡೆಗೊಳಿಸಿದ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ   

ಹೊಸಪೇಟೆ (ವಿಜಯನಗರ): ಕೂಡ್ಲಿಗಿ ತಾಲ್ಲೂಕಿನ ಕಾನಹೊಸಹಳ್ಳಿಯ ಪರಿಸರಾಸಕ್ತ ಸಂಚಲನ ತಂಡವು ನೀರಿನ ಜಾಗೃತಿಗಾಗಿ ನಿರ್ಮಿಸಿರುವ ‘ನೀರಿನ ಗಂಡ’ ಎಂಬ ಹೆಸರಿನ ಮೂಕಿ ಕಿರುಚಿತ್ರವನ್ನು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರು ಭಾನುವಾರ ಬಿಡುಗಡೆಗೊಳಿಸಿದರು.

ಪ್ರಸ್ತುತ ದಿನಗಳಲ್ಲಿ ಮಾನವನ ನಿರ್ಲಕ್ಷ್ಯ ಹಾಗೂ ದುರಾಸೆಯಿಂದ ಉಂಟಾಗಿರುವ ನೀರಿನ ಬವಣೆ, ಅಂತರ್ಜಲ ಕುಸಿತ, ಹನಿ‌ ನೀರಿಗೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿರುವುದು ಹಾಗೂ ನೀರನ್ನು ಉಳಿಸುವ ಮಹತ್ವದ ಸಂದೇಶದೊಂದಿಗೆ ಈ ಕಿರುಚಿತ್ರ ರಚನೆಗೊಂಡಿದೆ.

ಕೆಂಚಮಲ್ಲನಹಳ್ಳಿಯ ಸಾಫ್ಟವೇರ್ ಎಂಜಿನಿಯರ್ ಪೂರ್ಣಚಂದ್ರ ತೇಜಸ್ವಿ ಅವರು ಕಥೆಯನ್ನು ನಿರ್ದೇಶನ ಮಾಡಿದ್ದು, ಹಿರೇಕುಂಬಳಗುಂಟೆಯ ನಾಗರಾಜ್ ಗೌಡ, ದಯಾನಂದ್ ಸಜ್ಜನ್, ಅಜಯ್, ಬಿ.ಟಿ.ಗುದ್ದಿ, ವಿನೋದ್ ಕೆ.ಎಸ್, ಸಿದ್ದೇಶ್ ಗೌಡ, ಮಾಸ್ಟರ್ ಸುಭಿಕ್ಷ, ಶ್ರೀಕಂಠ ಸ್ವಾಮಿ, ಶೃತಿ ಸತೀಶ್ ಅಭಿನಯಿಸಿದ್ದಾರೆ. ಭರತ್ ಸಜ್ಜನ್, ಮಹಾಂತೇಶ್, ಕೊಟ್ರೇಶ್ ತಂಡದಲ್ಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.