ಹೊಸಪೇಟೆ (ವಿಜಯನಗರ): ಇಲ್ಲಿನ ಟಿ.ಬಿ. ಡ್ಯಾಂ ನಿವಾಸಿ, ಮೈಸೂರು ಜೆಎಸ್‌ಎಸ್ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿರುವ ನಿತಿನ್ ನಾರಾಯಣ ಅವರು ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ಕೃಷ್ಣಮೃಗವನ್ನು ದತ್ತು ತೆಗೆದುಕೊಂಡಿದ್ದಾರೆ.
ಸೋಮವಾರ ಮೃಗಾಲಯಕ್ಕೆ ತೆರಳಿ, ಅಲ್ಲಿನ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್. ಕಿರಣ್ ಕುಮಾರ್ ಅವರಿಗೆ ₹7,500 ಚೆಕ್ ನೀಡಿದರು. ಬಳಿಕ ಕೃಷ್ಣಮೃಗವನ್ನು ಕಂಡರು. ನಿತಿನ್ ಅವರು ಟಿ.ಬಿ. ಡ್ಯಾಂ ಸಿಪಿಐ ನಾರಾಯಣ ಅವರ ಮಗ.
‘ಕೋವಿಡ್‌ನಿಂದ ಮೃಗಾಲಯದ ಪ್ರಾಣಿಗಳ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ‘ಪ್ರಜಾವಾಣಿ’ಯಲ್ಲಿ ವರದಿ ಓದಿದ್ದೆ. ಜೂ. 23ರಂದು ಮನೆಯಲ್ಲಿ ನನ್ನ ಜನ್ಮದಿನ ಆಚರಿಸಲು ಸಿದ್ಧತೆ ನಡೆದಿತ್ತು. ಮನೆಯವರಿಗೆ ಈ ಸಲ ಜನ್ಮದಿನ ಸರಳವಾಗಿ ಆಚರಿಸೋಣ. ಆ ಹಣ ಹಾಗೂ ನನ್ನ ಬಳಿ ಕೂಡಿಟ್ಟ ಸ್ವಲ್ಪ ಹಣ ಸೇರಿಸಿ ಮೃಗಾಲಯದ ಪ್ರಾಣಿ ದತ್ತು ತೆಗೆದುಕೊಳ್ಳುವೆ ಎಂದೆ. ಅದಕ್ಕೆ ಮನೆಯವರೆಲ್ಲ ಒಪ್ಪಿಕೊಂಡರು’ ಎಂದು ನಿತಿನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.