ಸಂಡೂರು: ‘ಗದಗ ಮತ್ತು ವಿಜಯಪುರ ರಾಮಕೃಷ್ಣ, ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿಯವರಿಂದ ಸಂಡೂರು ಪಟ್ಟಣದಲ್ಲಿ ಮೂರು ದಿನಗಳ ಕಾಲ ವಿವೇಕ ಮಂಟಪ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ' ಎಂದು ಭಾರತೀಯ ಸಂಸ್ಕೃತಿ ಉತ್ಸವ- 7ರ ಸ್ವಾಗತ ಸಮಿತಿ ಸದಸ್ಯರು ಹಾಗೂ ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿಯ ತಾಲ್ಲೂಕು ಅಧ್ಯಕ್ಷ ಬಿ.ನಾಗನಗೌಡ ತಿಳಿಸಿದರು.
ಪಟ್ಟಣದ ಬಿಕೆಜಿ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ನವೆಂಬರ್ 24, 25 ಹಾಗೂ 26 ರಂದು ಎಸ್.ಇ.ಎಸ್ ವಿದ್ಯಾಮಂದಿರ ಪಿಯು ಕಾಲೇಜಿನಲ್ಲಿ ಸಂಜೆ 6 ರಿಂದ 8 ಗಂಟೆಯವರೆಗೆ ‘ಉಜ್ವಲ ಜೀವನ ಎದುರಾಗಿದೆ ಆದರೂ? ಎಂಬ ವಿಷಯದಡಿ ಹಾಗೂ ಬದುಕಿನ ಅನೇಕ ಅಂಶಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.
25ರ ಬೆಳಿಗ್ಗೆ 11 ಗಂಟೆಗೆ ಎಸ್.ಇ.ಎಸ್ ಕಾಲೇಜಿನಲ್ಲಿ ಹಾಗೂ 26 ರ ಬೆಳಿಗ್ಗೆ 11ಗಂಟೆಗೆ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲಿದ್ದಾರೆ‘ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿಯ ಗೌರವ ಸಲಹೆಗಾರರಾದ ಬಸವರಾಜ್ ಮಸೂತಿ, ಸಿ.ಎಂ.ಶಿಗ್ಗಾಂವಿ, ಜಿಲ್ಲಾ ಸಂಯೋಜಕ ಪ್ರವೀಣ್ ನಾಯಕ್, ತಾಲ್ಲೂಕು ಸಂಚಾಲಕ ಕರಡಿ ಯರ್ರಿಸ್ವಾಮಿ, ಸಹ ಸಂಚಾಲಕ ಕುಮಾರಸ್ವಾಮಿ ಮೇಟಿ, ಸಲಹೆಗಾರ ಜಿ.ವೀರೇಶ್, ಸದಸ್ಯರಾದ ಷಣ್ಮುಖರಾವ್, ಜ್ಞಾನ ಭಾರತಿ ಕುಮಾರಸ್ವಾಮಿ, ಶಂಕರ್ ಯಾದವ್, ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.