ಹೊಸಪೇಟೆ (ವಿಜಯನಗರ): ಜಗಳೂರಿನ ಮೊಹಮ್ಮದ್ ಇಮಾಂ ಸ್ಮಾರಕ ಪ್ರದಾನ ಮಾಡುವ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗೆ ನಗರದ ಹಿರಿಯ ರಂಗಕರ್ಮಿ ಪಿಂಜಾರ ಅಬ್ದುಲ್ ಸಾಬ್ ಭಾಜನರಾಗಿದ್ದಾರೆ.
ಅಬ್ದುಲ್ ಅವರು ಭಾವೈಕ್ಯತಾ ವೇದಿಕೆಯ ಮೂಲಕ ಸಾಂಸ್ಕೃತಿಕ ಮತ್ತು ರಂಗಭೂಮಿ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶುಕ್ರವಾರ (ಫೆ.18) ಜಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಟ್ರಸ್ಟಿನ ಅಧ್ಯಕ್ಷ ಜೆ.ಕೆ. ಹುಸೇನ್ ಮಿಯಾ ಸಾಬ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.