ADVERTISEMENT

ವಿಜಯನಗರ | ಮೂರು ಅಕ್ರಮ ನಾಡ ಬಂದೂಕುಗಳು ವಶ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 10:54 IST
Last Updated 20 ಮಾರ್ಚ್ 2023, 10:54 IST
   

ಹೊಸಪೇಟೆ (ವಿಜಯನಗರ): ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂರು ನಾಡ ಬಂದೂಕುಗಳ ಜತೆಗೆ ಇಬ್ಬರನ್ನು ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೂಡ್ಲಿಗಿ ತಾಲ್ಲೂಕಿನ ಅರ್ಜುನ ಚಿನ್ನೇನಹಳ್ಳಿ ಗ್ರಾಮದ ರೂಪ್ಲಾ ನಾಯ್ಕ ಅವರಿಂದ ಎರಡು ನಾಡ ಬಂದೂಕುಗಳು, 250 ಗ್ರಾಂ ಮದ್ದಿನ ಪುಡಿ, 3 ಅಡಿ ಕಬ್ಬಿಣದ ಪೈಪ್‌, 17 ಖಾಲಿ ಕೇಪ್‌ ಮತ್ತು ಒಂದು ಬಿಳಿ ಟವೆಲ್‌ ಅನ್ನು ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಕೂಡ್ಲಿಗಿ ತಾಲ್ಲೂಕಿನ ರಾಮಸಾಗರ ಹಟ್ಟಿ ಗ್ರಾಮದ ಬಿ. ಬಸವರಾಜ ಎಂಬುವರಿಂದ ಒಂದು ನಾಡ ಬಂದೂಕು, 150 ಗ್ರಾಂ ಮದ್ದಿನ ಪುಡಿ, ಬಟ್ಟೆ ಚೀಲ, ಮೋಟಾರ್‌ ಬೈಕ್‌ ವಶಕ್ಕೆ ತೆಗೆದುಕೊಂಡಿದ್ದಾರೆ. ರೂಪ್ಲಾ ನಾಯ್ಕ ಹಾಗೂ ಬಸವರಾಜ, ಅನುಮತಿ ಇಲ್ಲದೆ ಈ ಬಂದೂಕುಗಳನ್ನು ಉಪಯೋಗಿಸುತ್ತಿದ್ದರು

ADVERTISEMENT

‘ರೂಪ್ಲಾ ನಾಯ್ಕ ಕೂಡ್ಲಿಗಿ ತಾಲ್ಲೂಕಿನ ಸಿಡೇಗಲ್ಲು ರಸ್ತೆಯಲ್ಲಿರುವ ಗಂಡಬೊಮ್ಮನಹಳ್ಳಿ ಕ್ರಾಸ್ ಬಳಿ ಇರುವ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದರು. ಬಸವರಾಜ, ತಾಲ್ಲೂಕಿನ ಹರವದಿ ಗ್ರಾಮದ ಅರಣ್ಯದಲ್ಲಿ ಓಡಾಡುತ್ತಿದ್ದಾಗ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌. ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.