ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ಮುರಿದು ಹೋಗಿರುವುದರಿಂದ ನೀರು ಖಾಲಿ ಮಾಡುವ ಸಲುವಾಗಿ ಎಲ್ಲಾ 33 ಗೇಟ್‌ಗಳನ್ನು ತೆರೆದು ಸುಮಾರು 1 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ನದಿಗೆ ಬಿಡಲಾಗುತ್ತಿದೆ.
ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಪಿ.ರೆಡ್ಡಿ ಮತ್ರು ಇತರ ಹಿರಿಯ ಅಧಿಕಾರಿಗಳು ವೈಕುಂಠ ಅತಿಥಿಗೃಹದಲ್ಲಿ ಭಾನುವಾರ ನಸುಕಿನಲ್ಲೇ ಸಭೆ ಆರಂಭಿಸಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ನೀರು ಭರ್ತಿಯಾಗಿದ್ದು, 60 ಟಿಎಂಸಿ ಅಡಿಯಷ್ಟು ಹೊರಹಾಕಿದರೆ ಅಂದರೆ 20 ಅಡಿ ನೀರಿನ ಮಟ್ಟ ಇಳಿಸಿದರೆ ಮಾತ್ರ ಗೇಟ್ ದುರಸ್ತಿ ಸಾಧ್ಯ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ನೀರು ಹೊರಗೆ ಬಿಡುವ ಕಾರ್ಯ ಇದೀಗ ನಡೆಯುತ್ತಿದೆ. ಸುಮಾರು 2 ಲಕ್ಷ ಕ್ಯುಸೆಕ್ ನೀರನ್ನು ಸತತ ನಾಲ್ಕು ದಿನ ಬಿಟ್ಟರೆ ಮಾತ್ರ ಈ ಮಟ್ಟ ತಲುಪಬಹುದು ಎಂದು ಹೇಳಲಾಗುತ್ತಿದೆ.
ಶನಿವಾರ ಮಧ್ಯರಾತ್ರಿ 12ರ ಸುಮಾರಿಗೆ ಗೇಟ್‌ನ ಚೈನ್ ಲಿಂಕ್ ಮುರಿದು, ಕ್ರಸ್ಟ್ ಗೇಟ್ ನೀರಲ್ಲಿ ಕೊಚ್ಚಿ ಹೋಗಿರುವುದರಿಂದ ಈ ಬೆಳವಣಿಗೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.