ADVERTISEMENT

ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ತೆರೆದು 49,143 ಕ್ಯುಸೆಕ್ ನೀರು ನದಿಗೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 8:09 IST
Last Updated 25 ಜುಲೈ 2024, 8:09 IST
<div class="paragraphs"><p>ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ತೆರೆದು ನದಿಗೆ ನೀರು ಹರಿಸುತ್ತಿರುವುದು</p></div>

ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ತೆರೆದು ನದಿಗೆ ನೀರು ಹರಿಸುತ್ತಿರುವುದು

   

ಪ್ರಜಾವಾಣಿ ಚಿತ್ರ: ಬಿ. ಬಾಬುಕುಮಾರ

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಿರುವ ಕಾರಣ ಒಟ್ಟು 20 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡುವ ಕಾರ್ಯ ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಆರಂಭವಾಗಿದೆ.

ADVERTISEMENT

1,633 ಗರಿಷ್ಠ ಮಟ್ಟದ ತುಂಗಭದ್ರಾ ಅಣೆಕಟ್ಟೆಯಲ್ಲಿ ಗುರುವಾರ ಮಧ್ಯಾಹ್ನ 12ರ ವೇಳೆಗೆ ನೀರಿನ ಮಟ್ಟ 1,632.11 ಅಡಿ ತಲುಪಿತ್ತು. 105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 102.21 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಮತ್ತೆ 8 ಗೇಟ್‌ಗಳನ್ನು ತೆರೆಯಲು ನಿರ್ಧರಿಸಿ ಅದರಂತೆ ನದಿಗೆ ಹೆಚ್ಚುವರಿ ನೀರು ಹರಿಸಲಾಯಿತು.

ಬೆಳಿಗ್ಗೆ 10 ಗಂಟೆಗೆ ಈಗಾಗಲೇ ತೆರೆಯಲಾಗಿದ್ದ 10 ಗೇಟ್‌ಗಳ ಜತೆಗೆ ಮತ್ತೆ ಎರಡು ಗೇಟ್‌ಗಳನ್ನು ತೆರೆದು ನೀರು ಹೊರಬಿಡಲಾಯಿತು. ಆಗ ಒಳಹರಿವಿನ ಪ್ರಮಾಣ 89,400 ಕ್ಯುಸೆಕ್ ಇತ್ತು. ಮತ್ತೆ ಎರಡು ಗಂಟೆಯಲ್ಲಿ ಒಳಹರಿವಿನ ಪ್ರಮಾಣ 92,620ಕ್ಕೆ ಹೆಚ್ಚಳವಾದ ಕಾರಣ ಮತ್ತೆ ಎಂಟು ಗೇಟ್‌ಗಳನ್ನು ತೆರೆಯಲಾಯಿತು. ಸದ್ಯ 10 ಗೇಟ್‌ಗಳಲ್ಲಿ 2 ಅಡಿ ಅಗಲದಲ್ಲಿ ಹಾಗೂ ಇನ್ನುಳಿದ 10 ಗೇಟ್‌ಗಳಲ್ಲಿ ಒಂದು ಅಡಿ ಅಗಲದಲ್ಲಿ ನೀರು ಹೊರಗೆ ಹರಿದು ಹೋಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.