ಕಾನಹೊಸಹಳ್ಳಿ: ಮಳೆ ಕೈಕೊಟ್ಟಿದ್ದರಿಂದ ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆಯಾದ ಮೆಕ್ಕೆಜೋಳ, ಸೂರ್ಯಕಾಂತಿ, ಸಜ್ಜೆ ಬೆಳೆಗಳು ಸಂಪೂರ್ಣ ಒಣಗಿ ಹೋಗಿವೆ. ಎದೆ ಎತ್ತರಕ್ಕೆ ಬೆಳೆದು ನಿಂತ ಬೆಳೆ, ನೀರಿಲ್ಲದೆ ಒಣಗುತ್ತಿದ್ದು ರೈತರ ಚಿಂತೆಗೆ ಕಾರಣವಾಗಿದೆ.
24,000 ಹೆಕ್ಟೇರ್ ಕೃಷಿ ಭೂಮಿಯಲ್ಲಿ 8,630 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 7,324 ಹೆಕ್ಟೇರ್ ಮೆಕ್ಕೆಜೋಳ, 1,852 ಹೆಕ್ಟೇರ್ ರಾಗಿ, 950 ಹೆಕ್ಟೇರ್ ಸೂರ್ಯಕಾಂತಿ, 416 ಹೆಕ್ಟೇರ್ ನವಣೆ, 360 ಹೆಕ್ಟೇರ್ ಬಿಳಿಜೋಳ ಬಿತ್ತನೆಯಾಗಿದೆ.
ಒಂದು ತಿಂಗಳಿಂದ ಮಳೆಯಾಗದ ಕಾರಣ ಹೋಬಳಿ ವ್ಯಾಪ್ತಿಯಲ್ಲಿ ಶೇಂಗಾ ಬಿತ್ತನೆಗೆ ಹಿನ್ನೆಡೆಯಾಗಿದೆ. ಧೈರ್ಯ ಮಾಡಿ ಕೆಲ ರೈತರು ಬಿತ್ತನೆ ಮಾಡಿರುವ ಬೆಳೆಗಳು ಒಣಗಿಹೋಗುತ್ತಿವೆ. ಮಳೆರಾಯನ ಮುನಿಸಿನಿಂದ ಹೊಲಗಳು ಬರಡಗುತ್ತಿವೆ ಎನ್ನುತ್ತಾರೆ ರೈತ ನಾಗರಾಜ.
ಮಳೆಯನ್ನೇ ನಂಬಿದ್ದ ರೈತರ ಜೀವನಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಬಿತ್ತನೆಗೊಂಡ ಶೇ60 ರಷ್ಟು ಬೆಳೆ ಭೂಮಿಯಲ್ಲಿಯೇ ಒಣಗುತ್ತಿದೆ. ಸದ್ಯ ಮಳೆಯಾದರೇ ಹಿಂಗಡ ಬಿತ್ತನೆತಯಾದ ಶೇ30 ರಷ್ಟು ಬೆಳೆ ಕೈಸೆರಲ್ಲಿದ್ದು ಇರುವ ಫಸಲು ಬಂದರೆ ಸ್ವಲ್ಪ ಪ್ರಮಾಣದಲ್ಲಿ ಜಾನುವಾರುಗಳಿಗಾದರೂ ಮೇವಾಗಲಿದೆ ಎನ್ನುತ್ತಾರೆ ರೈತರು.
ಜಾನುವಾರುಗಳ ಮೇವಿನ ಸಮಸ್ಯೆ ಚಿಂತೆಗೀಡು ಮಾಡಿದೆ, ದನಕರುಗಳನ್ನು ಮಾರಾಟ ಮಾಡಲು ಮನಸ್ಸು ಒಪ್ಪಲ್ಲ, ಅದರೇ ಬೇರೆ ಮಾರ್ಗಿವಿಲ್ಲ ಎಂದು ಬಯಲುತುಂಬರಗುದ್ದಿಯ ರೈತ ಕೊಟ್ರೇಶ್ ಅಲವತ್ತುಕೊಂಡರು.
ಮಳೆಯಿಲ್ಲದೇ ಬೆಳೆಗಳು ಒಣಗಲಾರಂಭಿಸಿವೆ ಬೆಳೆ ಸಮೀಕ್ಷೆಯ ಬಳಿಕ ನಷ್ಟದ ಪ್ರಮಾಣ ತಿಳಯಲಿದೆಟಿ.ಚೈತ್ರಾ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಕಾನಹೊಸಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.