ಹೊಸಪೇಟೆ (ವಿಜಯನಗರ): ನಗರದ ಚಿತ್ತವಾಡ್ಗಿ ಸಮೀಪದ ಐಎಸ್ಆರ್ ಕಾರ್ಖಾನೆ ಬಂದ್ ಮಾಡಿದ್ದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಎಂಬುದು ಸತ್ಯಕ್ಕೆ ದೂರವಾದುದು. ಈ ಆರೋಪದಲ್ಲಿ ಹುರುಳಿಲ್ಲ ಎಂದು ಕಾರ್ಖಾನೆಯ ನಿರ್ದೇಶಕ ಸಿದ್ದಾರ್ಥ ಮೊರಾರ್ಕ ತಿಳಿಸಿದ್ದಾರೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹೊಸ ಮಾರ್ಗಸೂಚಿಗಳಿಗೆ ತಕ್ಕಂತೆ ಕಾರ್ಖಾನೆ ನಡೆಸಲಾಗದ ಕಾರಣ 2016ರಲ್ಲಿ ನಮ್ಮ ಕುಟುಂಬ ಕಾರ್ಖಾನೆ ಬಂದ್ ಮಾಡಿ ಕ್ರಷಿಂಗ್ ನಿಲ್ಲಿಸಿತು. ಆದರೆ, ಇದಕ್ಕೆ ಆನಂದ್ ಸಿಂಗ್ ಕಾರಣರಲ್ಲ ಎಂದು ಅವರು ವಿಡಿಯೊ ಪ್ರಕಟಣೆ ಮೂಲಕ ಶುಕ್ರವಾರ ತಿಳಿಸಿದ್ದಾರೆ.
ಕಾರ್ಖಾನೆ ಮುಚ್ಚಲು ಆನಂದ್ ಸಿಂಗ್ ಅವರೇ ಕಾರಣ ಎಂದು ರಾಜಕೀಯ ಪಕ್ಷಗಳ ಕೆಲ ಮುಖಂಡರು, ರೈತ ಸಂಘಟನೆಗಳು, ಸಂಘ ಸಂಸ್ಥೆಗಳವರು ಆರೋಪಿಸುತ್ತಿರುವ ಬೆನ್ನಲ್ಲೇ ಕಾರ್ಖಾನೆಯ ನಿರ್ದೇಶಕರು ಅದರ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಆನಂದ್ ಸಿಂಗ್ ವಿರುದ್ಧ ಆರೋಪ ಮಾಡಿದರೆ ಅವರ ಪರ ಕಾರ್ಖಾನೆಯ ನಿರ್ದೇಶಕರೇಕೆ ಸ್ಪಷ್ಟೀಕರಣ ನೀಡಿದ್ದಾರೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.