ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಗುಬ್ಬಿಯನ್ನೇ ಹೋಲುವ ಅಪರೂಪದ ಪಕ್ಷಿ ಕಾಡು ಸಿಪಿಲೆ (ವ್ಯಾಗ್‌ಟೇಲ್) ಕಾಣಿಸಿಕೊಂಡಿದೆ.
ತಾಲ್ಲೂಕಿನ ಕಮಲಾಪುರದ ಪಕ್ಷಿ ವೀಕ್ಷಕ ಜಿ.ಎ. ಶಬರೀಶ ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ‘ಪೂರ್ವ ಏಷ್ಯಾ, ಯೂರೋಪ್ ರಾಷ್ಟ್ರಗಳಲ್ಲಿ ಕಾಡು ಸಿಪಿಲೆ ಹೆಚ್ಚಿನ ಸಂಖ್ಯೆಯಲ್ಲಿವೆ. ನಮ್ಮ ಸಂಡೂರು ಭಾಗದಲ್ಲೂ ಇವೆ. ಬೇರೆ ಎಲ್ಲ ಪಕ್ಷಿಗಳು ಹುಲ್ಲುಗಾವಲಿನಲ್ಲಿ ಮೊಟ್ಟೆ ಇಟ್ಟರೆ, ಕಾಡು ಸಿಪಿಲೆ ಮಾತ್ರ ಮರದ ಮೇಲೆ ಗೂಡುಕಟ್ಟಿ ಮರಿ ಇಡುತ್ತದೆ. ಹೊಸಪೇಟೆ, ಸಂಡೂರು ಸುತ್ತಮುತ್ತ ಅನೇಕ ಕಾಡುಸಿಪಿಲೆ ಪಕ್ಷಿಗಳಿವೆ. ಆದರೆ, ಅವುಗಳು ಜನರ ಕಣ್ಣಿಗೆ ಬೀಳುವುದು ಅಪರೂಪ’ ಎಂದು ಪಕ್ಷಿ ತಜ್ಞ ಸಮದ್ ಕೊಟ್ಟೂರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.