ADVERTISEMENT

ಬೆಂಕಿಯಿಂದ ತಾಯಿ ತೆಕ್ಕೆಗೆ ತೋಳದ ಮರಿಗಳು!

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 13:29 IST
Last Updated 7 ಜನವರಿ 2024, 13:29 IST
<div class="paragraphs"><p>ತೋಳದ ಮರಿಗಳು</p></div>

ತೋಳದ ಮರಿಗಳು

   

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಬಸರಕೋಡು ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಆರು ತೋಳಗಳ ಮರಿಗಳನ್ನು ಗ್ರಾಮದ ಯುವಕರು ಬೆಂಕಿಯಿಂದ ರಕ್ಷಿಸಿದ್ದು, ತಾಯಿ ತೋಳದ ತೆಕ್ಕೆಗೆ ಒಪ್ಪಿಸಿದ್ದಾರೆ.

ಗದ್ದೆಗೆ ಆಕಸ್ಮಿಕವಾಗಿ ಬೆಂಕಿಬಿದ್ದ ಸಂದರ್ಭದಲ್ಲಿ‌ ಸಮಯಕ್ಕೆ ಸರಿಯಾಗಿ ಭೇಟಿ ನೀಡಿದ ಯುವಕ ಸಂದೀಪ್ ರಾಣೆಬೆನ್ನೂರಿನ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಅವರಿಗೆ ಮಾಹಿತಿ ನೀಡಿದರು. ಅಪಾಯದ ಸ್ಥಿತಿಯಲ್ಲಿದ್ದ ಅಪರೂಪದ ತೋಳಗಳ ಮರಿಗಳ ಕುರಿತು ಅಧಿಕಾರಿ ಗ್ರೀನ್ ಎಚ್‌ಬಿಎಚ್‌ ಪದಾಧಿಕಾರಿಗಳ ಗಮನಕ್ಕೆ ತಂದು ರಕ್ಷಿಸುವಂತೆ ಮನವಿ ಮಾಡಿದರು.

ADVERTISEMENT

ತಂಡದ ಸದಸ್ಯರಾದ ವಿಜಯ್ ಇಟ್ಟಿಗಿ, ಆನಂದ್ ಬಾಬು,ವಿಕಾಸ್ ಬಾಫನಾ ಅವರು ವಿಳಂಬ ಮಾಡದೇ ಸ್ಥಳಕ್ಕೆ ತೆರಳಿ ಎಸಿಎಫ್ ಡಾ.ರಾಜೇಶ್ ಕುಮಾರ ಗಮನಕ್ಕೆ ತಂದರು. ಬಳಿಕ ಎಲ್ಲ ಮರಿಗಳನ್ನು ರಕ್ಷಿಸಲಾಯಿತು ಎಂದು ಪಕ್ಷಿಪ್ರೇಮಿ ವಿಜಯ್ ಇಟ್ಟಿಗಿ ತಿಳಿಸಿದರು.

ರಕ್ಷಿಸಿದ ತೋಳಗಳ ಮರಿಗಳನ್ನು ದೊರೆತ ಸ್ಥಳವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಅಲ್ಲೇ ಇರಿಸಿ ದೂರದ ಸ್ಥಳದಲ್ಲಿ ಕುಳಿತು ಗಮನಿಸಲಾಯಿತು, ರಾತ್ರಿ 10 ಗಂಟೆ ಸಮಯದಲ್ಲಿ ದೊಡ್ಡ ತೋಳಗಳು ಬಂದು ಬಾಯಲ್ಲಿ ಕಚ್ಚಿಕೊಂಡು ಸುರಕ್ಷಿತ ಜಾಗಕ್ಕೆ ತೆಗೆದುಕೊಂಡು ಹೋದವು ಎಂದು ತಿಳಿಸಿದರು. ತಾಯಿ ತೋಳದ ತೆಕ್ಕೆಗೆ ಮರಿಗಳನ್ನು ಒಪ್ಪಿಸಿ ನೆಮ್ಮದಿಯಲ್ಲಿ ಗ್ರೀನ್ ಎಚ್‌ಬಿಎಚ್‌ ತಂಡದ ಸದಸ್ಯರು ಪಟ್ಟಣಕ್ಕೆ ಮರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.