ADVERTISEMENT

ವಿಸ್ತರಣಾ ಚಟುವಟಿಕೆಗೆ ಕಾಲೇಜುಗಳೊಂದಿಗೆ ಒಪ್ಪಂದ: ಪ್ರೊ.ಡಿ.ವಿ.ಪರಮಶಿವಮೂರ್ತಿ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಇಂಗಿತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 16:19 IST
Last Updated 20 ಜುಲೈ 2024, 16:19 IST
ಹೊಸಪೇಟೆಯ ಎಸ್‍ಯುಬಿಎನ್ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ ಉಪನ್ಯಾಸ ಕಾರ್ಯಕ್ರಮವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಉದ್ಘಾಟಿಸಿದರು
ಹೊಸಪೇಟೆಯ ಎಸ್‍ಯುಬಿಎನ್ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ ಉಪನ್ಯಾಸ ಕಾರ್ಯಕ್ರಮವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಉದ್ಘಾಟಿಸಿದರು    

ಹೊಸಪೇಟೆ (ವಿಜಯನಗರ): ಮಹಿಳೆಯರು ಕನ್ನಡ ಭಾಷೆಯನ್ನು ತಲೆಮಾರುಗಳಿಂದಲೂ ಬಳಸುತ್ತ, ಬೆಳೆಸುತ್ತ ವಿಸ್ತಾರಗೊಂಡಿದೆ. ಗುಣಮಟ್ಟದ ಶಿಕ್ಷಣವನ್ನು ನೀಡಲು ಕನ್ನಡ ವಿಶ್ವವಿದ್ಯಾಲಯವು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ವಿಸ್ತರಣಾ ಚಟುವಟಿಕೆಗಳನ್ನು ನಡೆಸಲು ಒಡಂಬಡಿಕೆ ಮಾಡಿಕೊಳ್ಳಲಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಹೇಳಿದರು.

ನಗರದ ಎಸ್‍ಯುಬಿಎನ್ ಮಹಿಳಾ ಕಾಲೇಜಿನಲ್ಲಿ ಶನಿವಾರ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ಸಹಯೋದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈ.ಕೆ.ರಾಮಯ್ಯ ದತ್ತಿನಿಧಿ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ಹೊಸ ತಲೆಮಾರಿಗೆ, ಹಳಗನ್ನಡ ಮತ್ತು ಹೊಸಗನ್ನಡದಕ್ಕೆ ಖಂಡಿತ ಭವಿಸ್ಯವಿದೆ. ಕನ್ನಡ ಭಾಷೆಯು ಮಹಾಸಮುದ್ರದಂತೆ ಆಳ-ಅಗಲ, ವಿಸ್ತಾರ, ಹೊಂದಿದ್ದು, ನಿರಂತರವಾದ ಚಲನಶೀಲನತೆಯನ್ನು ಹೊಂದಿದೆ ಮತ್ತು ಜೀವಂತಿಕೆಯಿಂದ ಕೂಡಿದೆ’ ಎಂದರು.

ADVERTISEMENT

ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಮೋಹನ್ ಕುಂಟಾರ್‌ ಮಾತನಾಡಿ, ವೈ.ಕೆ. ರಾಮಯ್ಯ ದತ್ತಿನಿಧಿಯಿಂದ ಕನ್ನಡ ಭಾಷಾಂತರ ವಿಭಾಗದಲ್ಲಿ ನಿರಂತರವಾಗಿ ಕನ್ನಡ ಕಟ್ಟುವ ಕಾರ್ಯ ನಡೆಯುತ್ತಿದೆ ಎಂದರು.

ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಅನಸೂಯಾ ಅಂಗಡಿ, ನಿವೃತ್ತ ಪ್ರಾಚಾರ್ಯರಾದ ಪ್ರೊ.ಯು.ರಾಘವೇಂದ್ರ ರಾವ್‌, ಪ್ರೊ. ಕಿಚಡಿ ಚೆನ್ನಪ್ಪ, ಡಿ.ಎನ್. ಸುಜಾತ, ಸಿ. ದಿನಮಣಿ, ಮಲ್ಲಿಕಾರ್ಜುನ ಕೆ.ಎನ್, ಅಮೃತ್ ಕುಮಾರ್, ಓಂಕರೇಶ ಬಿ.ಜಿ., ಎರ್ರಿಸ್ವಾಮಿ ಎಚ್., ಸಂತೋಷ್ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.