ವಿಜಯಪುರ: ಚುನಾವಣಾ ಅಕ್ರಮಕ್ಕೆ ಅಧಿಕಾರ ದಾಹ ಮೂಲ ಕಾರಣ. ಇದನ್ನು ತಡೆಗಟ್ಟಲು ಯುವಜನತೆ ಯಾವುದೇ ಆಸೆ -ಆಮಿಷೆಗಳಿಗೆ ಬಲಿ ಯಾಗದೇ ಮತ ಚಲಾಯಿಸಬೇಕು ಎಂದು ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ಹೇಳಿದರು.ನಗರ ಹೊರವಲಯದ ಮಹಿಳಾ ವಿಶ್ವವಿದ್ಯಾಲಯ ಜ್ಞಾನಶಕ್ತಿ ಆವರಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಮಹಿಳಾ ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ, ರಾಜ್ಯಶಾಸ್ತ್ರ ವಿಭಾಗ, ವಿದ್ಯಾರ್ಥಿನಿಯರ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ 'ಚುನಾವಣೆ ಯಾರ ಹೊಣೆ' ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಚುನಾವಣೆಯು ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಪ್ರತಿ ಚುನಾವಣೆಯನ್ನು ಅವಲೋಕನ ಮಾಡಿದಾಗ, ಇದು ಕೆಟ್ಟ ಸಂಪ್ರದಾ ಯದಂತೆ ಬೆಳೆಯುತ್ತಿದೆ ಎಂಬುವುದು ಕಾಣಬಹುದಾಗಿದೆ. ಸುಧಾರಣೆ ಎಂಬುವುದು ಯಾರೋ ಬಂದು ಮಾಡುತ್ತಾರೆ ಎಂದು ನಿರೀಕ್ಷಿಸಿದರೆ ಅದು ನಮ್ಮ ಮೂರ್ಖತನ. ನಮ್ಮಿಂದ, ನಮ್ಮ ಮನೆಯಿಂದಲೇ ಆರಂಭ ವಾಗಬೇಕು ಎಂದು ತಿಳಿಸಿದರು.
ಅಕ್ರಮ ತಡೆಯಲು ಚುನಾವಣಾ ಆಯೋಗವು ಹೊಸ ತಂತ್ರಜ್ಞಾನವನ್ನು ಅಳವಡಿಸುತ್ತಿರುವುದು ಮತ್ತು ಮತ ದಾರರಲ್ಲಿ ಜಾಗೃತಿ ಮೂಡಿ ಸುವ ಕಾರ್ಯಕ್ರಮಗಳನ್ನು ಮಾಡುತ್ತಿ ರುವುದು ಶ್ಲಾಘನೀಯ. ಆದರೆ ಮತ ದಾರರಲ್ಲಿ ಚುನಾವಣಾ ಆಮಿಷ ಗಳಿಗೆ ಒಳಗಾಗದಂತೆ ಅರಿವು ಮೂಡಿ ಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕಾರ್ಯ ವಾಗಬೇಕಿದೆ ಎಂದರು.
ಮಹಿಳಾ ವಿವಿ ಕುಲಪತಿ ಪ್ರೊ.ಸಬಿಹಾ ಮಾತನಾಡಿ, ಇಂದಿನ ಯುವ ಜನತೆ ಸ್ಥಿರವಾದ ಚಿಂತನೆ ಮತ್ತು ನಿರ್ಧಾರವನ್ನು ಕೈಗೊಂಡರೆ ಚುನಾ ವಣೆಯ ಅಕ್ರಮವನ್ನು ತಡೆಯಲು ತಮ್ಮ ಅಳಿಲು ಸೇವೆ ಸಲ್ಲಿಸಿದಂತಾಗುತ್ತದೆ. ಮಹಿಳೆಯರಲ್ಲಿ ಮತದಾನದ ಜಾಗೃತಿ ಮೂಡಿಸುವ ಮತ್ತು ಅದರ ಮಹತ್ವ ತಿಳಿಸುವ ಅವಶ್ಯಕತೆವಿದೆ ಎಂದರು.
ಚಾಣಕ್ಯ ಕರಿಯರ್ ಅಕಾಡೆಮಿ ಮುಖ್ಯಸ್ಥ ಎನ್.ಎಂ.ಬಿರಾದಾರ, ಪತ್ರಕರ್ತ ಚಂದ್ರಶೇಖರ ಬೆಳೆಗೆರೆ ಮಾತ ನಾಡಿದರು. ವಿದ್ಯಾರ್ಥಿನಿ ಯರೊಂದಿಗೆ ಸಂವಾದ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು ಹೊರತಂದ ಮಹಿಳಾ ಧ್ವನಿ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಕುಲಸಚಿವ ಪ್ರೊ.ಎಲ್.ಆರ್. ನಾಯಕ, ಪತ್ರಕರ್ತ ಬಸವರಾಜ ಭೂಸಾರೆ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಡಾ.ಹನು ಮಂತಯ್ಯ ಪೂಜಾರಿ, ರಾಜ್ಯಶಾಸ್ತ್ರ ವಿಭಾಗದ ಸಂಯೋಜಕ ಡಾ.ಆರ್.ವಿ.ಗಂಗಶೆಟ್ಟಿ, ಸಿಬ್ಬಂದಿ ಇದ್ದರು. ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಡಿದರು. ಪ್ರೊ.ಓಂಕಾರ ಕಾಕಡೆ ಪ್ರಾಸ್ತಾವಿಕ ಮಾತನಾಡಿದರು. ಸುಷ್ಮಾ ಪವಾರ ಸ್ವಾಗತಿಸಿದರು. ಸ್ನೇಹಾ ಹಳ್ಳದಮನಿ ನಿರೂಪಿಸಿದರು. ಆಶಾ ಮಧಬಾವಿ ವಂದಿಸಿದರು.
**
ಚುನಾವಣಾ ಅಕ್ರಮ ತಡೆಯುವ ಜೊತೆ, ಮಹಿಳೆಯರಲ್ಲಿ ಮತದಾನದ ಜಾಗೃತಿ ಮೂಡಿಸುವ ಜತೆಗೆ ಅದರ ಮಹತ್ವ ತಿಳಿಸುವ ಕೆಲಸವಾಗಲಿಪ್ರೊ.ಸಬಿಹಾ, ಮಹಿಳಾ ವಿವಿ ಕುಲಪತಿ.
**
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.