ADVERTISEMENT

ವಿಜಯಪುರ | 18 ಭಿಕ್ಷುಕರ ರಕ್ಷಣೆ: ನಿರಾಶ್ರಿತ ಕೇಂದ್ರಕ್ಕೆ ದಾಖಲು

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 15:56 IST
Last Updated 12 ಜುಲೈ 2024, 15:56 IST
ವಿಜಯಪುರ ನಗರದ ವಿವಿಧೆಡೆ ಭಿಕ್ಷಾಟನೆಯಲ್ಲಿ ತೊಡಗಿದ್ದ ಭಿಕ್ಷುಕರನ್ನು ನಿರಾಶ್ರಿತರ ಪರಿಹಾರ ಕೇಂದ್ರದ ಸಿಬ್ಬಂದಿ ಶುಕ್ರವಾರ ರಕ್ಷಣೆ ಮಾಡಿದರು
ವಿಜಯಪುರ ನಗರದ ವಿವಿಧೆಡೆ ಭಿಕ್ಷಾಟನೆಯಲ್ಲಿ ತೊಡಗಿದ್ದ ಭಿಕ್ಷುಕರನ್ನು ನಿರಾಶ್ರಿತರ ಪರಿಹಾರ ಕೇಂದ್ರದ ಸಿಬ್ಬಂದಿ ಶುಕ್ರವಾರ ರಕ್ಷಣೆ ಮಾಡಿದರು   

ವಿಜಯಪುರ: ವಿಜಯಪುರ ನಗರದ ವಿವಿಧೆಡೆ ಭಿಕ್ಷಾಟನೆಯಲ್ಲಿ ತೊಡಗಿದ್ದ 18 ಜನ ಭಿಕ್ಷುಕರನ್ನು ರಕ್ಷಣೆ ಮಾಡಿ ನಗರದ ಅಫಜಲಪೂರ ಟಕ್ಕೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ದಾಖಲು ಮಾಡಿ ಆಶ್ರಯ ಒದಗಿಸಲಾಯಿತು.

ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ನಗರ ಸಂಚಾರ ಕೈಗೊಂಡ ಸಂದರ್ಭದಲ್ಲಿ ನಗರದ ವಿವಿಧೆಡೆ ಇರುವ ನಿರಾಶ್ರಿತರು-ಭಿಕ್ಷುಕರನ್ನು ಕಂಡು, ತಕ್ಷಣ ನಿರಾಶ್ರಿತ ಕೇಂದ್ರದ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ರಕ್ಷಣೆ ಮಾಡಿ, ಆಶ್ರಯ ಒದಗಿಸಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಕ್ರಮಕೈಗೊಳ್ಳಲಾಗಿದೆ.

‌ವಿಜಯಪುರ ನಗರದ ಲಕ್ಷ್ಮೀ ಗುಡಿ ಹತ್ತಿರ, ಗಾಂಧಿ ಚೌಕಿ, ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್, ರೇಲ್ವೆ ಸ್ಟೇಷನ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುತ್ತಿರುವ 16 ಜನ ಪುರುಷರು ಹಾಗೂ ಇಬ್ಬರು ಮಹಿಳೆಯರನ್ನು ನಿರಾಶ್ರಿತರ ಪರಿಹಾರ ಕೇಂದ್ರದ ಸಿಬ್ಬಂದಿ  ರಕ್ಷಣೆ ಮಾಡಿ ಆಶ್ರಯ ಒದಗಿಸಿದ್ದಾರೆ.

ADVERTISEMENT

‘ನಗರ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲಿಯಾದರೂ ಭಿಕ್ಷುಕರು, ನಿರಾಶ್ರಿತರು ಕಂಡು ಬಂದಲ್ಲಿ ಭಿಕ್ಷುಕರ ಸಹಾಯವಾಣಿ ಟೋಲ್ ಫ್ರಿ ಸಂಖ್ಯೆ: 10581, ಮೊ: 9482300400 ಗೆ ಕರೆ ಮಾಡಿ ಮಾಹಿತಿ ನೀಡಿದ್ದಲ್ಲಿ ಕೂಡಲೇ ಅವರನ್ನು ರಕ್ಷಣೆ ಮಾಡಿ, ಕೇಂದ್ರದಲ್ಲಿ ಆಶ್ರಯ ಒದಗಿಸಲಾಗುವುದು’ ಎಂದು ನಿರಾಶ್ರಿತರ ಕೇಂದ್ರದ ಅಧೀಕ್ಷಕ ಬಸವರಾಜ ನಾಟೀಕಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.