ಆಲಮಟ್ಟಿ (ವಿಜಯಪುರ ಜಿಲ್ಲೆ): ಇಲ್ಲಿಯ ಕೃಷ್ಣಾ ನದಿಯ ಹಳೆ ಚಿಮ್ಮಲಗಿ ಬಳಿಯ ಬಾವಾಸಾಬ್ ಗುಡ್ಡದ ಬಳಿ ಗುರುವಾರ ಮೀನುಗಾರಿಕೆ ನಡೆಸುತ್ತಿದ್ದ ಸ್ಥಳೀಯ ಮೀನುಗಾರರೊಬ್ಬರಿಗೆ 38 ಕೆ.ಜಿ ತೂಕದ ದೊಡ್ಡ ಮೀನು ಬಲೆಗೆ ಬಿದ್ದಿದೆ.
ಈಗ ಕೃಷ್ಣೆಯ ಹಿನ್ನೀರು ಕಡಿಮೆಯಾಗಿದೆ. ಆಳದ ನೀರಿನಲ್ಲಿ ಬೃಹತ್ ಗಾತ್ರದ ಮೀನುಗಳು ಇರುತ್ತವೆ. ಕೆಲ ದಿನಗಳಿಂದ ದೊಡ್ಡ ಗಾತ್ರದ ಮೀನು ಬೀಳುವ ಅಗಲದ ಬಲೆಯನ್ನೇ ಮೀನುಗಾರರು ಬಳಸುತ್ತಿದ್ದಾರೆ.
‘ಇದು ಕಟ್ಲಾ ಜಾತಿಗೆ ಸೇರಿದ ಮೀನಾಗಿದ್ದು, 38 ಕೆ.ಜಿ ತೂಕವಿದೆ. ಕಳೆದ ವಾರ 35 ಕೆ.ಜಿ ತೂಕದ ಮೀನು ಇದೇ ಸ್ಥಳದಲ್ಲಿ ಇನ್ನೊಬ್ಬ ಮೀನುಗಾರನಿಗೆ ಸಿಕ್ಕಿತ್ತು. ಈಗ ನನಗೆ ಸಿಕ್ಕಿದ್ದು ಖುಷಿಯಾಗಿದೆ’ ಎಂದು ಮೀನುಗಾರ ಭರತ ಯಮನೂರಿ ಸಾಳೆ ಸಂಭ್ರಮಿಸಿದರು.
₹5,700 ಕ್ಕೆ ಮಾರಾಟ:
ಪ್ರತಿನಿತ್ಯ ಇಲ್ಲಿ ಸಿಗುವ ಮೀನುಗಳನ್ನು ಮೀನು ಸಗಟು ವ್ಯಾಪಾರಿ ಅರಳದಿನ್ನಿಯ ಮಹಾಂತೇಶ ಧನವೆ ಖರೀದಿಸುತ್ತಾರೆ. ಈ ದೊಡ್ಡ ಗಾತ್ರದ ಮೀನನ್ನು ಕೂಡ ಕೆ.ಜಿಗೆ ₹150 ರಂತೆ ₹5,700ಗೆ ಅವರು ಖರೀದಿಸಿದ್ದಾಗಿ ಸಾಳೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.