ಇಂಡಿ: ತಾಲ್ಲೂಕಿನ ಲಚ್ಯಾಣದಲ್ಲಿ ಪವಾಡ ಪುರುಷ ಲಿಂಗೈಕ್ಯ ಸಿದ್ಧಲಿಂಗ ಮಹಾರಾಜರ 96ನೇ ಪುಣ್ಯಾರಾಧನೆ ಅಂಗವಾಗಿ ನಡೆದ ಶರಣರ ದರ್ಶನ ಕುರಿತ ಪ್ರವಚನ ಕಾರ್ಯಕ್ರಮ 16ನೇ ದಿನದಲ್ಲಿ ಮುಂದುವರೆದಿದೆ.
ಮುಗಳಖೋಡ ಯಲ್ಲಾಲಿಂಗೇಶ್ವರ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಎನ್ನ ಗುರು ಲಚ್ಯಾಣದ ಲಿಂಗೈಕ್ಯ ಸಿದ್ಧಲಿಂಗ ಮಹಾರಾಜರ ಶಕ್ತಿ ದೊಡ್ಡದು. ನಾನು ಎದೆ ತಟ್ಟಿ ಹೇಳುತ್ತೇನೆ. ಗುರುಗಳನ್ನು ಮನಸ್ಸು ಬಿಚ್ಚಿ ನೋಡಿರಿ, ಶುದ್ಧವಾದ ಭಾವನೆಯಿಂದ ನೋಡಿರಿ. ನೀವು ಭಕ್ತಿಯಿಂದ ಬೇಡಿ ನಿಮ್ಮ ಮನೆ ಮನೆ ತಲುಪುವುದರೊಳಗಾಗಿ ಆಶೀರ್ವಾದ ಮಾಡುವ ಶಕ್ತಿ ಆತನಲ್ಲಿದೆ ಎಂದು ತಿಳಿಸಿದರು.
ಬಂಥನಾಳ ಗ್ರಾಮದ ಶಂಕರಲಿಂಗ ಮಹಾಶಿವಯೋಗಿಗಳ ಶಿಷ್ಯನ ಶಿಷ್ಯ ಮುಗಳಖೋಡದ ಯಲ್ಲಾಲಿಂಗೇಶ್ವರ ಮಠದ ಪೀಠಾಧಿಪತಿ ಮುರುಘೇಂದ್ರ ಸ್ವಾಮೀಜಿ ಗುರುವಿನ ಗುರು ಪೀಠದ ಪೀಠಾಧೀಶ ವೃಷಭಲಿಂಗೇಶ್ವರ ಮಹಾಶಿವಯೋಗಿಗಳನ್ನು ಸನ್ಮಾನಿಸಿದರು.
ಪ್ರವಚನಕಾರ ತುಂಗಳ ಗ್ರಾಮದ ಮಾತೋಶ್ರೀ ಅನುಸೂಯಾದೇವಿ, ಹೂವಿನ ಹಿಪ್ಪರಗಿಯ ದ್ರಾಕ್ಷಾಯಣಿ ಅಮ್ಮನವರು, ಅಗರಖೇಡದ ಅಭಿನವ ಪ್ರಭುಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಸಂಗೀತ ಶಿಕ್ಷಕ ಮುರಳಿಧರ ಭಜಂತ್ರಿ ಹಾಗೂ ತಬಲಾ ಕಲಾವಿದ ಮಹಾದೇವ ಹೂಗಾರ ಸಂಗೀತ ಸೇವೆ ಸಲ್ಲಿಸಿದರು. ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡಕರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.