ADVERTISEMENT

ಸದಾಶಿವ ಆಯೋಗ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಎಂ.ಬಿ.ಪಾಟೀಲ ನಿವಾಸದ ಮುಂದೆ ಧರಣಿ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 11:23 IST
Last Updated 7 ಸೆಪ್ಟೆಂಬರ್ 2021, 11:23 IST
ವಿಜಯಪುರ ನಗರದಲ್ಲಿರುವ ಶಾಸಕ ಎಂ.ಬಿ.ಪಾಟೀಲ ಅವರ ನಿವಾಸದ ಎದುರು ಮಂಗಳವಾರ  ಕರ್ನಾಟಕ ರಾಜ್ಯ ಮಾದಿಗ ಸಮಾಜದ ವತಿಯಿಂದ ಧರಣಿ ನಡೆಸಲಾಯಿತು
ವಿಜಯಪುರ ನಗರದಲ್ಲಿರುವ ಶಾಸಕ ಎಂ.ಬಿ.ಪಾಟೀಲ ಅವರ ನಿವಾಸದ ಎದುರು ಮಂಗಳವಾರ  ಕರ್ನಾಟಕ ರಾಜ್ಯ ಮಾದಿಗ ಸಮಾಜದ ವತಿಯಿಂದ ಧರಣಿ ನಡೆಸಲಾಯಿತು   

ವಿಜಯಪುರ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಅನುಷ್ಠಾನ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾದಿಗ ಸಮಾಜದ ವತಿಯಿಂದ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಅವರ ನಿವಾಸದ ಎದುರು ಮಂಗಳವಾರ ಧರಣಿ ನಡೆಸಲಾಯಿತು.

ಸಮಾಜದ ಬೆಳಗಾವಿ ವಿಭಾಗದ ಅಧ್ಯಕ್ಷಮಹೇಶ ಬಿ. ಅಗರಖೇಡ ಮಾತನಾಡಿ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು 6 ವರ್ಷ 8 ತಿಂಗಳ ಕಾಲ ಸಮೀಕ್ಷೆ ನಡೆಸಿದ ಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯಾ ಆಧಾರದ ಮೇಲೆ ಒಳಮೀಸಲಾತಿ ನೀಡುವುದಕ್ಕೆ ಶಿಫಾರಸ್ಸು ಮಾಡಿದೆ. ಆದರೆ, ಇಲ್ಲಿಯವರೆಗೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಅನುಷ್ಠಾನಗೊಳಿಸಲು ವಿಳಂಬ ಮಾಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ್ಯಾಯಮೂರ್ತಿ ಎ.ಜೆ. ಸದಾಶಿವ ವರದಿಯನ್ನು ಶೀಘ್ರವಾಗಿ ಸಚಿವ ಸಂಪುಟದಲ್ಲಿ ಮಂಡಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಸದಾಶಿವ ಆಯೋಗ ವರದಿ ಅನುಷ್ಠಾನಗೊಳಿಸಲು ವಿರೋಧ ವ್ಯಕ್ತಪಡಿಸಿರುವ ಸಚಿವ ಪ್ರಭು ಚವ್ಹಾಣ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದರು.

ಕಲಬುರ್ಗಿ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ನಾಟೀಕಾರ, ಬೆಳಗಾವಿ ವಿಭಾಗೀಯ ಪ್ರಧಾನ ಕಾರ್ಯದರ್ಶಿರವೀಂದ್ರ ನಾರಾಯಣಪುರ, ಪ್ರತಾಪ ಭರತ, ರಮೇಶ ಕಟ್ಟಿಮನಿ, ಶಿವಾಜಿ ಪಠಾಣ, ಧರ್ಮಣ್ಣ ಪೂಜಾರಿ, ಕುಮಾರ ಜಾಧವ, ಜ್ಞಾನೇಶ ಪೂಜಾರಿ, ಬಾಳಪ್ಪ ಹರಿಜನ, ನೀಲಪ್ಪ ತೊಂಡಿಕಟ್ಟಿ, ಅಶೋಕ ರತ್ನಾಕರ, ಶಿವಾನಂದ ರೂಗಿ, ರಾಜು ಮಾಂಗ, ಮಲ್ಲಪ್ಪ ಮಾಂಗ, ಸೋಮಶೇಖರ ಶ್ರೀಮಂತ, ರಾಕೇಶ ಗಾಯಕವಾಡ, ಸಿದರಾಮ ನಂದರಗಿ, ಉಮೇಶ ಮಾಂಗ, ಗಂಗಾಧರ ಮಾಂಗ, ಶ್ರಿಶೈಲ ಕಟ್ಟಿಮನಿ, ಸದಾಶಿವ ಮಾದರ ಶಿವಾ ಕೋಳಿ, ಖಾಜಪ್ಪ ಮಾಂಗ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.