ADVERTISEMENT

ತಿಕೋಟಾ: ಬಳಕೆಯಾಗದ ಬಾಬಾನಗರ ಮಾರುಕಟ್ಟೆ

ಪರಮೇಶ್ವರ ಎಸ್.ಜಿ.
Published 31 ಜುಲೈ 2024, 6:53 IST
Last Updated 31 ಜುಲೈ 2024, 6:53 IST
ತಿಕೋಟಾ ತಾಲ್ಲೂಕಿನ ಬಾಬಾನಗರ ಗ್ರಾಮದ ನಡುವೆ ನಡೆಯುವ ಸಂತೆಯಲ್ಲಿ ರಸ್ತೆ ಮೇಲೆ‌ ಚರಂಡಿ‌ ನೀರು ಹರಿಯುತ್ತಿರುವುದು.
ತಿಕೋಟಾ ತಾಲ್ಲೂಕಿನ ಬಾಬಾನಗರ ಗ್ರಾಮದ ನಡುವೆ ನಡೆಯುವ ಸಂತೆಯಲ್ಲಿ ರಸ್ತೆ ಮೇಲೆ‌ ಚರಂಡಿ‌ ನೀರು ಹರಿಯುತ್ತಿರುವುದು.   

ತಿಕೋಟಾ: ಹತ್ತಾರು ವರ್ಷಗಳ ಹಿಂದೆ ಕೃಷಿ ಮಾರಾಟ ಇಲಾಖೆ ಎಪಿಎಂಸಿ ವತಿಯಿಂದ ನಬಾರ್ಡ್‌ ಯೋಜನೆಯಡಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ನಿರ್ಮಿಸಲಾದ ಗ್ರಾಮೀಣ ಸಂತೆ ಮಾರುಕಟ್ಟೆಯೂ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಉಪಯೋಗಿಸದೇ ಇರುವುದರಿಂದ ಪಾಳು ಬಿದ್ದಿದೆ.

ತಾಲ್ಲೂಕಿನ ಬಾಬಾನಗರ ಗ್ರಾಮದ ಹೊರವಲಯದಲ್ಲಿ ನಿರ್ಮಿಸಿದ ಸಂತೆಯ ಮಾರುಕಟ್ಟೆ ಉಪಯೋಗಿಸದೇ ಗ್ರಾಮದ ನಡುವೆ ಇಕ್ಕಟ್ಟಾದ ರಸ್ತೆ ಹಾಗೂ ಸರಾಗವಾಗಿ ಚರಂಡಿ ನೀರು ಹರಿಯುವ ಸ್ಥಳದಲ್ಲಿ ಸಂತೆ ನಡೆಯುತ್ತಿದೆ. ರಸ್ತೆ ಮೇಲೆ ಚರಂಡಿ ನೀರು ಹರಿಯುವುದು, ಮಳೆ ಬಂದಾಗ ಅವ್ಯವಸ್ಥೆ ಆಗುವುದರಿಂದ ಇಕ್ಕಟಾದ ಸ್ಥಳ ತೊಂದರೆಯಾಗುತ್ತಿದೆ.

ಎಸ್‌ಸಿ ಕಾಲೊನಿಯಲ್ಲಿ 14 ಶೌಚಾಲಯ ಇರುವ ಮಹಿಳಾ ಸಾರ್ವಜನಿಕ ಶೌಚಾಲಯ ಕಟ್ಟಡ ಸಮರ್ಪಕವಾಗಿ ಬಳಕೆಯಾಗದೇ ಹಾಳಾಗಿದೆ. ಬಳಕೆಗೆ ರಿಪೇರಿ ಮಾಡಿ ಮಹಿಳೆಯರಿಗೆ ಶೌಚಕ್ಕೆ ಅನೂಕೂಲ ಮಾಡಬೇಕೆಂದು ಗ್ರಾಮಸ್ಥರು ವಿನಂತಿಸಿದರು. ಬಹುತೇಕ ಓಣಿಗಳಲ್ಲಿ ಸಿಸಿ ರಸ್ತೆ ಇರದೇ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿವೆ.

ADVERTISEMENT

ಒಂಬತ್ತು ಸಾವಿರ ಜನಸಂಖ್ಯೆ ಇದ್ದರು ರಾಷ್ಟ್ರೀಕೃತ ಬ್ಯಾಂಕ್ ಇರದೇ ದ್ರಾಕ್ಷಿ ಬೆಳೆಗಾರರಿಗೆ, ಹೈನುಗಾರರಿಗೆ ಹಣಕಾಸು ವ್ಯವಹಾರಕ್ಕೆ ತೊಂದರೆಯಾಗುತ್ತಿದೆ.

ಹೆದ್ದಾರಿ ಪಕ್ಕದ ಈ ಗ್ರಾಮ ಹೋಬಳಿ ಮಾಡಬೇಕೆಂಬುದು ಗ್ರಾಮಸ್ಥರ ಆಶಯ. ದ್ರಾಕ್ಷಿ ಬೆಳೆಗಾರರಿಗೆ ಸ್ಟೋರೇಜ್, ತೊಗರಿ, ಕಡ್ಲಿ ಕಾಳುಗಳ ಸಂಸ್ಕರಣಾ ಘಟಕ ಮಾಡಿ ಸರ್ಕಾರ ರೈತರಿಗೆ ಅನೂಕೂಲ ಮಾಡಬೇಕು. ಆರೋಗ್ಯ ಉಪ ಕೇಂದ್ರ ಇದ್ದು ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಕೇಂದ್ರ ಮಾಡಿ ಸಿಬ್ಬಂದಿ ನೇಮಿಸಬೇಕು. ಸರ್ಕಾರಿ ಶಾಲೆಗಳಲ್ಲಿ 1200ಕ್ಕೂ ಹೆಚ್ಚು ಮಕ್ಕಳಿದ್ದು ಹೆಣ್ಣು ಮಕ್ಕಳಿಗೆ ಸುಸಜ್ಜಿತ ಹಾಸ್ಟೇಲ್ ಮಾಡಬೇಕು. ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷಾ ಕೇಂದ್ರ ಆಗಬೇಕು. ಗ್ರಾಮದಲ್ಲಿ ಪುರಾತನ ಕಾಲದ ದೇವಾಲಯಗಳಿದ್ದು ಜೀರ್ಣೊದ್ದಾರ ಕಾರ್ಯ ಆಗಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಿದಗೊಂಡ ರುದ್ರಗೌಡರ ಸರ್ಕಾರಕ್ಕೆ ಆಗ್ರಹಿಸಿದರು.

ತಿಕೋಟಾ ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ನಿರ್ಮಿಸಿದ ಗ್ರಾಮೀಣ ಸಂತೆ ಕಟ್ಟೆ ಉಪಯೋಗಿಸದೇ ಇರುವುದು.
ಸಂತೆ ಕಟ್ಟೆಯಲ್ಲೆ ಸಂತೆ ನಡೆಸುವಂತೆ ಸಾರ್ವಜನಿಕರಿಗೆ ವ್ಯಾಪಾರಸ್ಥರಿಗೆ ಜಾಗೃತಿ ಮೂಡಿಸುತ್ತೇವೆ. ಆ ಸಂತೆ ಕಟ್ಟೆಯ ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ  
-ರೇಣುಕಾ ಸೋಲಾಪುರ ಪಿಡಿಒ ಬಾಬಾನಗರ ಗ್ರಾಪಂ

ಸರ್ಕಾರಿ ಶಾಲೆ; ಕೊಠಡಿ ಕೊರತೆ

ಹಿರೇಕುರಬರ ವಸತಿ ಸರ್ಕಾರಿ ಶಾಲೆಯ 136 ಮಕ್ಕಳ‌ ಸಂಖ್ಯೆಗೆ ಅನುಗುಣವಾಗಿ ಕೋಣೆಗಳ ಕೊರತೆ ಇದೆ ಹೆಚ್ಚವರಿ ಕೋಣೆ ನಿರ್ಮಿಸಬೇಕು. ಶಾಲಾ ರಸ್ತೆ ಮಳೆಗಾಲದಲ್ಲಿ ಕೆಸರಿನಿಂದ ತೊಂದರೆಯಾಗುತ್ತಿದ್ದು ಎರಡು ಕಿ.ಮೀ. ಡಾಂಬರಿ ರಸ್ತೆ ನಿರ್ಮಿಸಬೇಕು. ಗ್ರಾಮದ ಸರ್ಕಾರಿ ಶಾಲೆಯ ಕೆಲವು ಕೋಣೆಗಳು ಸೋರುತ್ತಿದ್ದು ರಿಪೇರಿ ಮಾಡಿ ಹೆಚ್ಚುವರಿ ಕೋಣೆ ನಿರ್ಮಿಸಬೇಕು. ಪೂರ್ಣ ಪ್ರಮಾಣದ ಕಂಪೌಂಡ್‌ ನಿರ್ಮಿಸಬೇಕು. ಪಾನಿಸಾಹೇಬ ವಸ್ತಿ ಶಾಲೆಗೆ ಪೂರ್ಣ ಪ್ರಮಾಣದ ಕಂಪೌಂಡ್‌ ಹಾಗೂ ಗೇಟ್ ಇಲ್ಲ. ಒಂದು ಕೋಣೆ ಶಿಥಿಲಗೊಂಡಿದೆ. ಅದನ್ನು ರಿಪೇರಿ ಮಾಡಿ ಮಕ್ಕಳಿಗೆ ಅನೂಕೂಲ ಮಾಡಬೇಕು. ಯಲ್ಲಮ್ಮವಸ್ತಿ ಶಾಲೆಗೆ ಗೇಟ್ ಅಳವಡಿಕೆಯಾಗಬೇಕು. ಪ್ರೌಢ ಶಾಲೆಯ ಗೇಟ್ ಕಾಮಗಾರಿ ಪೂರ್ಣವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.