ವಿಜಯಪುರ: ಆಲಮಟ್ಟಿ ಜಲಾಶಯಕ್ಕೆ ಬುಧವಾರದಿಂದ ಒಳಹರಿವು ಆರಂಭಗೊಂಡಿದೆ. ಜಲಾಶಯದ ನೀರಿನ ಸಂಗ್ರಹದ (2002ರಿಂದ) ಇತಿಹಾಸದಲ್ಲಿಯೇ ಬುಧವಾರ (ಜುಲೈ 12) ಆರಂಭಗೊಂಡ ಒಳಹರಿವು ಅತ್ಯಂತ ತಡವಾದ ಒಳಹರಿವು. ಇಲ್ಲಿಯವರೆಗೆ 2019 ರಲ್ಲಿ ಜುಲೈ 3ರಂದು ತಡವಾಗಿ ಒಳಹರಿವು ಆರಂಭವಾಗಿತ್ತು.
ಬುಧವಾರ ಜಲಾಶಯಕ್ಕೆ 19,172 ಕ್ಯುಸೆಕ್ (1.65 ಟಿಎಂಸಿ ಅಡಿ) ನೀರು ಹರಿದು ಬಂದಿದೆ. ಜಲಾಶಯದಲ್ಲಿ ಸದ್ಯ 20.547 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಬಳಕೆಯೋಗ್ಯ 3 ಟಿಎಂಸಿ ಅಡಿ ನೀರಿದೆ. ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಕೊರತೆಯ ಕಾರಣ ಹೆಚ್ಚಿನ ನೀರು ಆಲಮಟ್ಟಿಗೆ ಹರಿದು ಬರುವುದು ತೀರಾ ಕಡಿಮೆ. ಹೀಗಾಗಿ ಮುಂಗಾರು ಹಂಗಾಮಿಗೆ ಕೃಷಿಗೆ ನೀರು ಹರಿಸುವುದು ಅನುಮಾನ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.