ADVERTISEMENT

ಆಲಮಟ್ಟಿ: ಕೃಷ್ಣಾ ನದಿಯಲ್ಲಿ ಅಲಾಯಿ ದೇವರುಗಳ ಸ್ನಾನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 15:58 IST
Last Updated 12 ಜುಲೈ 2024, 15:58 IST
ಮೋಹರಂ ಪ್ರಯುಕ್ತ ಆಲಮಟ್ಟಿಯ ಕೃಷ್ಣಾ ನದಿ ದಂಡೆಯಲ್ಲಿ ಭಕ್ತರು ಅಲಾಯಿ ದೇವರುಗಳನ್ನು ಸ್ನಾನ ಮಾಡಿಸಿದ ದೃಶ್ಯ ಶುಕ್ರವಾರ ಕಂಡುಬಂತು
ಮೋಹರಂ ಪ್ರಯುಕ್ತ ಆಲಮಟ್ಟಿಯ ಕೃಷ್ಣಾ ನದಿ ದಂಡೆಯಲ್ಲಿ ಭಕ್ತರು ಅಲಾಯಿ ದೇವರುಗಳನ್ನು ಸ್ನಾನ ಮಾಡಿಸಿದ ದೃಶ್ಯ ಶುಕ್ರವಾರ ಕಂಡುಬಂತು   

ಆಲಮಟ್ಟಿ: ಆಲಮಟ್ಟಿ ಸುತ್ತಮುತ್ತಲಿನ ನಾನಾ ಗ್ರಾಮಗಳಲ್ಲಿ ಐದು ದಿನಗಳ ಕಾಲ ಮೋಹರಂ ಹಬ್ಬದ ಪ್ರಯುಕ್ತ ಕೂಡುವ ನೂರಾರು ಅಲಾಯಿ ದೇವರುಗಳು, ಪಂಜಾಗಳ ಸ್ನಾನ ಶುಕ್ರವಾರ ಆಲಮಟ್ಟಿಯ ಕೃಷ್ಣೆಯ ಹಿನ್ನೀರಿನಲ್ಲಿ ನಡೆಯಿತು.

ಒಂದೊಂದು ಗ್ರಾಮದ ಅಲಾಯಿ ದೇವರುಗಳನ್ನು ಆ ಗ್ರಾಮದ ನೂರಾರು ಯುವಕರು ಹಲಗೆ ವಾದನದ ಮೂಲಕ ಕೃಷ್ಣಾ ನದಿಗೆ ತಂದು ಶೃದ್ಧಾ ಭಕ್ತಿಯಿಂದ ಸ್ನಾನ ಮಾಡಿಸಿ, ನಂತರ ನದಿ ದಂಡೆಯಲ್ಲಿ ಕಂಬಳಿ ಹಾಸಿ, ದೇವರುಗಳಿಗೆ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು.

ನಂತರ ಅಲಾಯಿ ದೇವರುಗಳನ್ನು ತಮ್ಮ ತಮ್ಮ ಗ್ರಾಮಗಳಿಗೆ ವಾಹನಗಳ ಮೂಲಕ ನಾನಾ ವಾದ್ಯಗಳ ಮಧ್ಯೆ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು. ಐದು ದಿನಗಳ ಕಾಲ ಮೋಹರಂ ಆಚರಣೆ ಪ್ರತಿ ಗ್ರಾಮದಲ್ಲಿಯೂ ಶೃದ್ಧೆಯಿಂದ ಜರುಗಲಿದೆ.

ADVERTISEMENT
ಆಲಮಟ್ಟಿಯ ಕೃಷ್ಣಾ ನದಿಯ ದಂಡೆಯಲ್ಲಿ ಸ್ನಾನದ ನಂತರ ಅಲಾಯಿ ದೇವರುಗಳ ಪೂಜೆಯ ದೃಶ್ಯ
ಆಲಮಟ್ಟಿಯ ಕೃಷ್ಣಾ ನದಿಯಲ್ಲಿ ಅಲಾಯಿ ದೇವರುಗಳ ಸ್ನಾನದ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.