ADVERTISEMENT

ಪಂಡರಾಪುರಕ್ಕೆ ಆಷಾಢ ದಿಂಡಿಯಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 16:21 IST
Last Updated 5 ಜುಲೈ 2024, 16:21 IST
ದೇವರಹಿಪ್ಪರಗಿ ಮೂಲಕ ಪಂಢರಾಪುರಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿರುವ ಬಳ್ಳಾರಿ ಜಿಲ್ಲೆಯ ಏಳುಬೆಂಚಿ ಗ್ರಾಮದ ಭಕ್ತಾಧಿಗಳು
ದೇವರಹಿಪ್ಪರಗಿ ಮೂಲಕ ಪಂಢರಾಪುರಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿರುವ ಬಳ್ಳಾರಿ ಜಿಲ್ಲೆಯ ಏಳುಬೆಂಚಿ ಗ್ರಾಮದ ಭಕ್ತಾಧಿಗಳು   

ದೇವರಹಿಪ್ಪರಗಿ: ಪಂಡರಪುರ ವಿಠ್ಠಲನ ಆಷಾಢ ಮಾಸದ ಉತ್ಸವದಲ್ಲಿ ಪಾಲ್ಗೊಳ್ಳಲು ಬಳ್ಳಾರಿ ಜಿಲ್ಲೆಯ ಏಳುಬೆಂಚಿ ಗ್ರಾಮಸ್ಥರು 18ನೇ ವರ್ಷದ ದಿಂಡಿ ಪಾದಯಾತ್ರೆಯ ಮೂಲಕ ಪ್ರಯಾಣ ಕೈಗೊಂಡರು.

ಪಟ್ಟಣದಲ್ಲಿ ಶುಕ್ರವಾರ ಪ್ರವೇಶಿಸಿದ ದಿಂಡಿ ಯಾತ್ರೆಯ ಪಾದಯಾತ್ರಿಕರು ಅಲ್ಪ ವಿಶ್ರಾಂತಿಯ ನಂತರ ಪ್ರಯಾಣ ಆರಂಭಿಸಿದರು. ಈ ಸಂದರ್ಭದಲ್ಲಿ ಷಡಕ್ಷರಿ ಮಾತನಾಡಿ, ನಾವು ಕಳೆದ 18 ವರ್ಷಗಳಿಂದ ಪಾದಯಾತ್ರೆ ಕೈಗೊಂಡು ಆಷಾಢ ಮಾಸದ ಉತ್ಸವದಲ್ಲಿ ಪಾಲ್ಗೊಳ್ಳುತ್ತೇವೆ. ನಾವು ಏಳುಬೆಂಚಿ ಗ್ರಾಮದಿಂದ ಕಳೆದ ಜೂನ್ 27 ರಿಂದ ಯಾತ್ರೆ ಆರಂಭಿಸಿದ್ದು, ಇದೇ ತಿಂಗಳ 11 ರಂದು ಪಂಡರಪುರ ತಲುಪಲಿದ್ದೇವೆ. ನಿನ್ನೆ ಕೊಂಡಗೂಳಿ ಗ್ರಾಮದ ಆಶ್ರಮದಲ್ಲಿ ತಂಗಿದ್ದು, ಬೆಳಿಗ್ಗೆ ಸ್ನಾನಾದಿಗಳನ್ನು ಮುಗಿಸಿಕೊಂಡು ಯಾತ್ರೆ ಆರಂಭಿಸಿದ್ದೇವೆ ಎಂದರು.

ಪಾದಯಾತ್ರೆಯಲ್ಲಿ ಡಿ.ಪಾಂಡುರಂಗಸ್ವಾಮಿ, ಕೆ.ಜಂಬುನಾಥ, ಶರಣಪ್ಪ, ಪರಮೇಶ, ಕೆ.ಹೊನ್ನುರಸ್ವಾಮಿ, ಎರೆಸ್ವಾಮಿ, ಚಂದ್ರಶೇಖರ, ಓಬಳೇಶ, ಗಂಗಮ್ಮ, ಲಕ್ಷ್ಮೀ, ಶಾಂತಮ್ಮ, ಗಾರಲಿಂಗಪ್ಪ, ತಿಮ್ಮಪ್ಪ, ಶರಣಬಸು ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.