ADVERTISEMENT

ಪ್ರತಿಪಕ್ಷವಾಗಿ ಬಿಜೆಪಿ ವಿಫಲ: ಯತ್ನಾಳ ಆರೋಪ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 14:33 IST
Last Updated 1 ಜುಲೈ 2024, 14:33 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ‘ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರು ಸಾಲು, ಸಾಲು ಹಗರಣಗಳನ್ನು ಮಾಡುತ್ತಿದ್ದರೂ ಅವುಗಳನ್ನು ಬಯಲಿಗೆಳೆದು, ಸರ್ಕಾರವನ್ನು ಸಮರ್ಥವಾಗಿ ಕಟ್ಟಿಹಾಕುವಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ವಿಫಲವಾಗಿದೆ’ ಎಂದು ತಮ್ಮದೇ ಪಕ್ಷದ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಕೇವಲ ಜೈಲ್‌ ಭರೋ, ದಿಕ್ಕಾರ ಕೂಗಿದರೆ ಸಾಲದು. ಕಾಂಗ್ರೆಸ್‌ ಸರ್ಕಾರವನ್ನು ಸಮರ್ಥವಾಗಿ ಕಟ್ಟಿಹಾಕುವ ಕೆಲಸ ಮಾಡಬೇಕು’ ಎಂದರು.

‘ನಮ್ಮವರು ಜೈಲ್‌ ಭರೋ ಮಾಡಲು ಹೋದಾಗ ಪೊಲೀಸರು ಇವರನ್ನು ಹಿಡಿದು ಬಸ್‌ ಒಳಗೆ ಕೂರಿಸಿ ಸೆಲ್ಯೂಟ್ ಹೊಡೆದು, ಕಾಫಿ, ಟಿ ಕುಡಿಸಿ, ಇಡ್ಲಿ, ದೋಸೆ ತಿನ್ನಿಸಿ ಹೊರಗೆ ಬಿಡುತ್ತಾರೆ. ಹೊರಬಂದ ಬಳಿಕ ನಮ್ಮವರು ಭಾರೀ ಹೋರಾಟ ಮಾಡಿದ್ದೇವೆ, ಉಗ್ರ ಹೋರಾಟ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ’ ಎಂದು ಛೇಡಿಸಿದರು.

ADVERTISEMENT

‘ನಮ್ಮ ಹುಳುಕು ನೀವು ತೆಗೆಯಬೇಡಿ, ನಿಮ್ಮ ಹುಳುಕು ನಾವು ತೆಗೆಯಲ್ಲ ಎಂದು ಕಾಂಗ್ರೆಸ್‌ ಸಚಿವರು ಬೆದರಿಕೆ ಹಾಕುತ್ತಿದ್ದಾರೆ. ಅದಕ್ಕೆ ಅಂಜಿ ನಮ್ಮ ನಾಯಕರು ಕೇವಲ ತೋರಿಕೆಗೆ ಹೋರಾಟ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು. 

‘ನನಗೂ ಅಂಜಿಸಲು ಬಂದರು. ಆದರೆ, ನನ್ನದು ಯಾವ ಹುಳುಕು ಅವರಿಗೆ ಸಿಗದ ಕಾರಣಕ್ಕೆ ತಲೆನೋವು ಆಗಿದ್ದೇನೆ. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್‌ನ ಅನೇಕ ಹಗರಣಗಳನ್ನು ಬಿಚ್ಚಿಡುತ್ತೇನೆ. ವಾಲ್ಮಿಕಿ ನಿಗಮದಲ್ಲಿ ಆಗಿರುವ ಬಹು ಕೋಟಿ ಹಗರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ಕೊಡಬೇಕು, ಭ್ರಷ್ಟಾಚಾರ ಮಾಡಿದವರು ಜೈಲಿಗೆ ಹೋಗಬೇಕು, ಇಲ್ಲವಾದರೆ ನಾನೇ ಪಿಐಎಲ್‌ ಹಾಕುತ್ತೇನೆ’ ಎಂದು ಎಚ್ಚರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.