ADVERTISEMENT

ವಾಹನ ಸವಾರರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಕ್ಕೆ‌ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 16:24 IST
Last Updated 21 ಮಾರ್ಚ್ 2024, 16:24 IST
ತಿಕೊಟಾ ತಾಲ್ಲೂಕಿನ ಅಳಗಿನಾಳ ಗ್ರಾಮದ ಹತ್ತಿರ ಮಹಾರಾಷ್ಟ್ರ ಗಡಿ ರಸ್ತೆಗೆ ಹೊಂದಿಕೊಂಡಿರುವ ವಾಹನ ಸವಾರರಿಗೆ ಅಪಾಯವಿರುವ ಭಾವಿಯನ್ನು ಜಿಲ್ಲಾಧಿಕಾರಿ ಟಿ. ಭೂಬಾಲನ ವೀಕ್ಷಿಸಿದರು
ತಿಕೊಟಾ ತಾಲ್ಲೂಕಿನ ಅಳಗಿನಾಳ ಗ್ರಾಮದ ಹತ್ತಿರ ಮಹಾರಾಷ್ಟ್ರ ಗಡಿ ರಸ್ತೆಗೆ ಹೊಂದಿಕೊಂಡಿರುವ ವಾಹನ ಸವಾರರಿಗೆ ಅಪಾಯವಿರುವ ಭಾವಿಯನ್ನು ಜಿಲ್ಲಾಧಿಕಾರಿ ಟಿ. ಭೂಬಾಲನ ವೀಕ್ಷಿಸಿದರು   

ತಿಕೋಟಾ: ಮಾಹಾರಾಷ್ಟದ ಜತ್ತ ತಾಲ್ಲೂಕಿನ ಗುಡ್ಡಾಪೂರ ದಾನಮ್ಮದೇವಿ ದೇವಸ್ಥಾನಕ್ಕೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು ಗಡಿ ಭಾಗದ ಕರ್ನಾಟಕದ ಅಳಗಿನಾಳ ಗ್ರಾಮದ ಕದಂ ವಸ್ತಿ ಹತ್ತಿರ ಇರುವ ರಸ್ತೆಗೆ ಹೊಂದಿಕೊಂಡಿರುವ ಭಾವಿಯನ್ನು ಜಿಲ್ಲಾಧಿಕಾರಿಗ ಟಿ.ಭೂಬಾಲನ, ಪೋಲಿಸ್ ವರಿಷ್ಟಾಧಿಕಾರಿ ಹೃಷಕೇಶ ಸೋನಾವನೆ ಪರಿಶೀಲಿಸಿದರು.

ಇಕ್ಕಟ್ಟಾದ ರಸ್ತೆಯ ತಿರುವಿನ ಅಂಚಿಗೆ ಹೊಂದಿಕೊಂಡಿರುವ ಬಾವಿ ವಾಹನ ಸವಾರರಿಗೆ ಆತಂಕ ಸೃಷ್ಟಿಸಿದೆ. ವಾಹನ ಚಲಾಯಿಸುವಾಗ ಈ ರಸ್ತೆ ಮದ್ಯ ಜೀವ ಭಯದಲ್ಲೆ ಹಿಡಿದುಕೊಂಡು ಸಂಚರಿಸಬೇಕಾಗಿದೆ. ಅಮಾವಾಸ್ಯೆ ಬಂದರೆ ಈ ಮಾರ್ಗವಾಗಿ ಹತ್ತಾರು ವಾಹನ, ಕಾರು ಹಾಗೂ ಬೈಕ್ ಗಳು ಹೊಗುವದರಿಂದ ಮತ್ತು ಗುಡ್ಡಾಪೂರಕ್ಕೆ ನಿತ್ಯ ವಾಹನಗಳು ಸಂಚರಿಸುವುದನ್ನು ಮಾಹಿತಿ ಪಡೆದುಕೊಂಡರು.

ಆನಂತರ ಯೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜೋತೆ ಮಾತನಾಡುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು. ಈಗ ತುರ್ತಾಗಿ ಭಾವಿ ಹತ್ತಿರ ಸೂಚನಾ ಫಲಕ ಅಳವಡಿಸಿ ವಾಹನ ಚಲಾಯಿಸುವವರಿಗೆ ಮಾಹಿತಿ ತಿಳಿಯುವಂತೆ ಮಾಡಬೇಕು ಎಂದು ಸ್ಥಳಿಯ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಅಳಗಿನಾಳ ಗ್ರಾಮದ ಜನರಿಗೆ ಮತ್ತು ಧನಕರುಗಳಿಗೆ ನೀರಿನ ಸಮಸ್ಯೆ ಇದ್ದು ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಗ್ರಾಮದ ಮುಖಂಡರು ಮನವರಿಕೆ ಮಾಡಿದರು.

ಡಿಎಸ್‌ಪಿ ಗೀರಮಲ್ಲ ತಳಕಟ್ಟಿ, ತಾಲ್ಲೂಕಕಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಪ್ರವೀಣಕುಮಾರ ಸಾಲಿ, ಗ್ರಾಮ ಪಂಚಾಯತ ಕಾರ್ಯದರ್ಶಿ ಮುರಘೆಪ್ಪ ಸಾಂಪೂರ, ಸುಭಾಷ ಬಿರಾದಾರ, ಜಿ. ಜಿ. ಪವಾರ, ಜಮಖಂಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.