ADVERTISEMENT

ಬೈಕ್ ಕಳ್ಳನ ಬಂಧನ: ಮೂರು ಬೈಕ್, ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:54 IST
Last Updated 22 ಅಕ್ಟೋಬರ್ 2024, 14:54 IST
ವಶಪಡಿಸಿಕೊಳ್ಳಲಾದ ಬೈಕ್‌ ಹಾಗೂ ಚಿನ್ನಾಭರಣಗಳೊಂದಿಗೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್.ಎಲ್. ಮನ್ನಾಭಾಯಿ ಹಾಗೂ ಮುದ್ದೇಬಿಹಾಳ ಪೊಲೀಸ್ ಠಾಣೆಯ ಅಧಿಕಾರಿಗಳು
ವಶಪಡಿಸಿಕೊಳ್ಳಲಾದ ಬೈಕ್‌ ಹಾಗೂ ಚಿನ್ನಾಭರಣಗಳೊಂದಿಗೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್.ಎಲ್. ಮನ್ನಾಭಾಯಿ ಹಾಗೂ ಮುದ್ದೇಬಿಹಾಳ ಪೊಲೀಸ್ ಠಾಣೆಯ ಅಧಿಕಾರಿಗಳು   

ಮುದ್ದೇಬಿಹಾಳ: ಬೈಕ್‌ ಕಳವಿನ ಆರೋಪದಲ್ಲಿ ಇಲ್ಲಿಯ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ ಆತನಿಂದ ಮೂರು ವಿವಿಧ ಕಂಪನಿಯ ಬೈಕ್‌ಗಳು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ತಾಳಿಕೋಟೆ ತಾಲ್ಲೂಕು ಕಲಕೇರಿಯ ನಿವಾಸಿ ಹಾಲಿ ವಸ್ತಿ ಆಶ್ರಯ ಕಾಲೊನಿಯ ನಿವಾಸಿಯಾಗಿದ್ದ ಸಿಕಂದರ ನಾಯ್ಕೋಡಿ ಬಂಧಿತ ಆರೋಪಿ.

ಫೆ. 11ರಂದು ತಮ್ಮ ಬೈಕ್ ಕಳವಾಗಿದೆ ಎಂದು ಬ.ಬಾಗೇವಾಡಿ ತಾಲ್ಲೂಕು ಕಾನ್ನಾಳದ ನಿವಾಸಿ, ಹಾಲಿ ವಸ್ತಿ ಮುದ್ದೇಬಿಹಾಳದ ಆಶ್ರಯ ಕಾಲನಿಯಲ್ಲಿರುವ ಉಮೇಶ ಹಡಪದ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಬಂಧಿತ ಆರೋಪಿಯಿಂದ 3 ಬೈಕ್‌, 45 ಗ್ರಾಂ ತೂಕದ ವಿವಿಧ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕಳವು ಮಾಡಿದ ಮಾಡಿದ ಒಟ್ಟು ವಸ್ತುಗಳ ಮೌಲ್ಯ ₹ 5.24 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ನಡೆಸಿದ ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ಅಪರಾಧ ವಿಭಾಗದ ಪಿಎಸ್‌ಐ ಆರ್.ಎಲ್. ಮನ್ನಾಭಾಯಿ, ಸಿಬ್ಬಂದಿ ಬಿ.ಕೆ. ಗುಡಿಮನಿ, ಆರ್.ಎಸ್. ಪಾಟೀಲ್, ಪಿ.ಎಸ್. ಠಾಣೇದ, ವಿ.ಎನ್. ಹಾಲಗಂಗಾಧರಮಠ, ರಮೇಶ ಮದರಿ ಅವರಿಗೆ ಎಸ್‌ಪಿ ಪ್ರಶಂಸಾ ಪತ್ರ, ಬಹುಮಾನ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.