ADVERTISEMENT

‘ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಿದ ಅಂಬೇಡ್ಕರ್’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 15:48 IST
Last Updated 15 ಏಪ್ರಿಲ್ 2024, 15:48 IST
ಹೊರ್ತಿ:ಸಮೀಪದ ಇಂಚಗೇರಿಯಲ್ಲಿ  ಬಿ.ಆರ್.ಅಂಬೇಡ್ಕರ್‍ ಅವರ 133ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೋಮವಾರ ನಡೆದ  ಕಾರ್ಯಕ್ರಮದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿದರು.
ಹೊರ್ತಿ:ಸಮೀಪದ ಇಂಚಗೇರಿಯಲ್ಲಿ  ಬಿ.ಆರ್.ಅಂಬೇಡ್ಕರ್‍ ಅವರ 133ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೋಮವಾರ ನಡೆದ  ಕಾರ್ಯಕ್ರಮದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿದರು.   

ಹೊರ್ತಿ: ‘ಲಿಖಿತ ಸಂವಿಧಾನ ಬರೆದು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಲಪಡಿಸಿದ ಕೀರ್ತಿ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ' ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ಇಂಚಗೇರಿ ಗ್ರಾಮದಲ್ಲಿ ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅಂಬೇಡ್ಕರ ಅವರ ಅವರ ತತ್ವ, ಆಚಾರ ವಿಚಾರ ,ಆದರ್ಶ, ಶಿಕ್ಷಣ ,ಸಂಘಟನೆ ಹೋರಾಟ ನಮಗೆಲ್ಲರಿಗೂ ಪ್ರೆರಣೆಯ ಯಾಗಿವೆ' ಎಂದರು.

ಹಿರಿಯ ಮುಖಂಡ ಅಭಿಷೇಕ ಚಕ್ರವರ್ತಿ ಮಾತನಾಡಿ, ‘ಶಿಕ್ಷಣ, ಸಂಘಟನೆ, ಹೋರಾಟದ ಕುರಿತು ಅಂಬೇಡ್ಕರ್‌ ಅವರು ತಿಳಿಸಿದಂತೆ ನಾವೆಲ್ಲರೂ ಅರಿಕೆ ಮಾಡಿಕೊಳ್ಳಬೇಕು. ಅವರ ಚರಿತ್ರೆ ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ' ಎಂದರು.

ADVERTISEMENT

ವಿಜಯಪುರ ನಗರ ಘಟಕದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳೆನವರ ‘ಪ್ರತಿಯೊಬ್ಬ ಭಾರತೀಯರಿಗೆ ಸಮಾನ ಹಕ್ಕು ನೀಡಿ ,ಸಮಾನತೆಯ ಬಾಳ್ವೆಯ ಬದುಕಿನ ಮಾರ್ಗ ತೋರಿ ಅವರು ಹಾಕಿಕೊಟ್ಟ ಮಾರ್ಗ ನಮಗೆ ದಾರಿದೀಪವಾಗಿದೆ' ಎಂದರು.

ನಾದದ ಸಾವಯವ ಕೃಷಿಕ ಮಣ್ಣು ಮತ್ತು ನೀರು ಸಂರಕ್ಷಣಾ ಕೃಷಿ ಪಂಡಿತ ಎಸ್.ಟಿ.ಪಾಟೀಲ ಮಾತನಾಡಿದರು. ವಿದ್ಯಾರ್ಥಿನಿ ದಾಕ್ಷಾಯಿಣಿ ಅಂಬೇಡ್ಕರ್‌ ಜೀವನ ಚರಿತ್ರೆಯ ಕುರಿತು ವಿವರಿಸಿದರು. ಸಾಹಿತಿ ಶಿಲ್ಪಾ ಭಷ್ಮೆ ಅಂಬೇಡ್ಕರ್ ಕುರಿತು ಕವನ ಓದಿದರು.

ಶಂಕ್ರೆಪ್ಪ ಮಹಾರಾಜರು ಸಾನಿಧ್ಯ ವಹಿಸಿದ್ದರು. ಅಥಣಿಯ ಅಪ್ಪಾಸಾಹೇಬ ದೀವಾನಮೋಳ, ಸದಾಶಿವ ಮಹಾರಾಜರು,ಹೊಸಟ್ಟಿಯ ಭೀಮಣ್ಣ ಮಹಾರಾಜರು , ಸುಭಾಷ ಓಂಕಾರಶೆಟ್ಟಿ, ಬಾಬು ಚವ್ಹಾಣ, ಲಾಲೂ ರಾಠೋಡ, ಮಹಾದೇವ ನಾವಿ, ರಪೀಕ್ ಯಾತಗೀರ, ಜೆಟ್ಟೆಪ್ಪ ಅರವತ್ತಿ, ಸಿದ್ಧರಾಮ ಏಳಗಿ, ಅಶೋಕ ಬೆಳ್ಳೆನವರ, ಶಂಕರ ದೇವರ, ಲಕ್ಷ್ಮೀಬಾಯಿ ಬೆಳ್ಳೆನವರ, ಶಿವರಾಯ ಬೆಳ್ಳೆನವರ, ಹಾಗೂ ಇಂಚಗೇರಿ ಗ್ರಾಮದ ಬಾಬಸಾಹೇಬ ಅಂಬೇಡ್ಕರ ಯುವಕ ಮಂಡಳಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಲೋಕನಾಥ ಬೆಳ್ಳೆನವರ ಸ್ವಾಗತಿಸಿದರು, ಸಂಗಮೇಶ ಬೆಳ್ಳೆನವರ ನಿರೂಪಿಸಿದರು, ದಯಾನಂದ ಬೆಳ್ಳೆನವರ ವಂದಿಸಿದರು.

ಹೊರ್ತಿ:ಸಮೀಪದ ಇಂಚಗೇರಿಯಲ್ಲಿ  ಬಿ.ಆರ್.ಅಂಬೇಡ್ಕರ್‍ ಅವರ 133ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೋಮವಾರ ನಡೆದ  ಕಾರ್ಯಕ್ರಮದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿದರು.
ಹೊರ್ತಿ:ಸಮೀಪದ ಇಂಚಗೇರಿಯಲ್ಲಿ ಬಿ.ಆರ್.ಅಂಬೇಡ್ಕರ್‍ ಅವರ 133ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೋಮವಾರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.