ಚಡಚಣ: ಭಾರತ ಸೇವಾದಳ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ದೇಶಪ್ರೇಮ, ಸಹೋದರತೆ ಹಾಗೂ ಭಾವೈಕ್ಯದ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ ಎಂದು ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಮ್.ಬಿ.ಬಿರಾದಾರ ಹೇಳಿದರು.
ಸಮೀಪದ ಅಜ೯ನಾಳ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಲಾದ ನಾಲ್ಕು ದಿನಗಳ ತಾಲ್ಲೂಕು ಮಟ್ಟದ ಭಾರತ ಸೇವಾದಳ ಮಕ್ಕಳ ನಾಯಕತ್ವ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ಎಂ.ಟಿ.ಪೂಜಾರಿ ಮಾತನಾಡಿ, ಸೇವಾದಳ ಶಿಸ್ತಿನ ಸಂಸ್ಥೆಯಾಗಿದ್ದು ಹಿಂದೂಸ್ಥಾನ ಸೇವಾದಳದ ಹೆಸರಿನಿಂದ 1923 ರಲ್ಲಿ ಆರಂಭವಾದ ಸಂಸ್ಥೆಯು 1950ರ ಮಾರ್ಚ್ 16 ರಂದು ಭಾರತ ಸೇವಾದಳವಾಗಿ ಪುನರ್ ನಾಮಕರಣಗೊಂಡಿತು. ಶಿಕ್ಷಕರಲ್ಲಿ, ಮಕ್ಕಳಲ್ಲಿ, ಯುವಕರಲ್ಲಿ ರಾಷ್ಟ್ರಾಭಿಮಾನ, ಶಿಸ್ತು, ಮಾನವೀಯ ಮೌಲ್ಯಗಳು, ನಾಯಕತ್ವ ಗುಣ ಹಾಗೂ ಭಾವೈಕ್ಯದ ಕುರಿತು ತರಬೇತಿ ನೀಡುತ್ತಾ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಸೇವಾದಳದ ಕಾರ್ಯ ನಿಜಕ್ಕೂ ಅಭಿನಂದನೀಯ ಎಂದರು.
ಭಾರತ ಸೇವಾದಳ ವಲಯ ಸಂಘಟಕ ನಾಗೇಶ ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಬ್ಬೀರ್ ಕ ಮುಲ್ಲಾ ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಅಪ್ಪಣ್ಣ ಬನಸೋಡೆ, ಶ್ರೀಶೈಲ ಚ ಬಿರಾದಾರ,ಎಸ್,ಡಿ,ಎಮ್,ಸಿ ಉಪಾಧ್ಯಕ್ಷ ಸಿದ್ದು ಕೆಂಗಾರ, ಸದಸ್ಯರಾದ ರಾಜು ಪೂಜಾರಿ, ಉಮೇಶ್ ಪಿರಗೊಂಡ, ಪ್ರಶಾಂತ್ ಪಾಟೀಲ್, ಪರಮೇಶ್ವರ್ ತಳವಾರ, ಮಜನು ಮುಜಾವರ, ಚಿದಾನಂದ ಬನಗೊಂಡೆ, ಸೇವಾದಳ ತಾಲ್ಲೂಕು ಕಾರ್ಯದರ್ಶಿ ಎಮ್,ಜಿ,ಸಾಂಗೋಲಿ, ಮುಖ್ಯಶಿಕ್ಷಕ ಎಸ್,ಬಿ,ತೇಲಿ,ಶಾಲಾ ಶಿಕ್ಷಕ ವೃಂದ, ಸೇವಾದಳ ಶಿಕ್ಷಕ ವೃಂದ, ಸೇವಾದಳ ಮಕ್ಕಳು, ಸಂಪನ್ಮೂಲ ಶಿಕ್ಷಕರು ಇನ್ನೂ ಹಲವರು ಉಪಸ್ಥಿತರಿದ್ದರು. ತಾಲ್ಲೂಕು ಅಧಿನಾಯಕ ಆರ್ ಎಸ್ ಗೋಡೆಕಾರ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ಸೈಫನ್ ಶೇಖ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.