ವಿಜಯಪುರ: ಜಾತ್ರಾ ಮಹೋತ್ಸವಗಳು ಕೋಮು ಸೌಹಾರ್ದತೆಯ ಪ್ರತೀಕವಾಗಿವೆ. ಸಮಾಜದಲ್ಲಿ ಸಾಮರಸ್ಯದ ಪ್ರತಿಬಿಂಬ ಮೂಡಿಸುತ್ತವೆ. ಜಾತ್ರಾ ಉತ್ಸವ ಸಂತೋಷದ ಹೊನಲು ಹರಿಸುತ್ತವೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಿ.ಎಲ್.ಚವ್ಹಾಣ ಹೇಳಿದರು.
ತಾಲ್ಲೂಕಿನ ಕನ್ನೂರ ಗ್ರಾಮದ ಸವಾಯಿ ವಸ್ತಿ ತೋಟದಲ್ಲಿನ ಹಜರತಪೀರ ದರ್ಗಾದ ಶಾಹನೂರವಲಿ ಬಾಬಾ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಜರುಗಿದ ಧಾರ್ಮಿಕ ಸಭೆ, ಗಣ್ಯರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವರ ಉಪಾಸಕಿ ಶಾರದಾಬಾಯಿ ರಾಠೋಡ, ಕನ್ನೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠ್ಠಲ ಭಜಂತ್ರಿ, ಹೊರ್ತಿ ಪಿಕೆಪಿಎಸ್ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ಸಚೀನ ರಾಠೋಡ, ಕಾಳು ಬೆಳ್ಳುಂಡಗಿ, ಬಾಬು ಚವ್ಹಾಣ, ದಲಿಸಾಬಾ ಹಿಪ್ಪರಗಿ, ಸಫಿಕ ಸಲೀಂ ಮುಜಾವರ್, ಮುತ್ತಣ್ಣಗೌಡ ಪಾಟೀಲ, ವಿಜು ರಾಠೋಡ, ಪುನೀತ್ ಚವ್ಹಾಣ, ಸವಾಯಿ ರಾಠೋಡ, ರಮೇಶಗೌಡ ಬಿರಾದಾರ, ಸೀತಾರಾಮ ಚವ್ಹಾಣ, ಮಶಾಖಸಾಬ ಮಂದಾರೆ, ಸಂಜು ಚವ್ಹಾಣ, ಸಂತೋಷ ಚವ್ಹಾಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.