ADVERTISEMENT

ಬಸವನಬಾಗೇವಾಡಿ: ಮೇಗಾ ಮಾರುಕಟ್ಟೆ ಮುಂಭಾಗದ ಕಾಂಪೌಂಡ್‌ ತೆರವು

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 14:19 IST
Last Updated 26 ಜುಲೈ 2024, 14:19 IST
ಬಸವನಬಾಗೇವಾಡಿಯ ಹೃದಯಭಾಗದಲ್ಲಿ ನಿರ್ಮಿಸಲಾಗಿರುವ ಮೇಗಾ ಮಾರುಕಟ್ಟೆಯ ಮುಂಭಾಗದ ಕಾಂಪೌಂಡ್‌ ಅನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಯಿತು
ಬಸವನಬಾಗೇವಾಡಿಯ ಹೃದಯಭಾಗದಲ್ಲಿ ನಿರ್ಮಿಸಲಾಗಿರುವ ಮೇಗಾ ಮಾರುಕಟ್ಟೆಯ ಮುಂಭಾಗದ ಕಾಂಪೌಂಡ್‌ ಅನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಯಿತು   

ಬಸವನಬಾಗೇವಾಡಿ: ಪಟ್ಟಣದ ಹೃದಯಭಾಗದಲ್ಲಿ ನಿರ್ಮಿಸಲಾಗಿರುವ ಮೇಗಾ ಮಾರುಕಟ್ಟೆಯ ಮುಂಭಾಗದ ಕಾಂಪೌಂಡ್‌ ಅನ್ನು ಗುರುವಾರ ತೆರವುಗೊಳಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ನೇತೃತ್ವದಲ್ಲಿ ನಡೆದ ಕಾರ್ಯಚರಣೆ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ತೆರವು ಸಂದರ್ಭದಲ್ಲಿ ಪುಟ್‌ಪಾತ್ ಮೇಲಿನ ಕೆಲ ಅಂಗಡಿಗಳ ವ್ಯಾಪಾರಸ್ಥರು  ವಿರೋಧ ವ್ಯಕ್ತಪಡಿಸಿದರು.

‘ಮೇಗಾ ಮಾರುಕಟ್ಟೆ ಕಾಮಗಾರಿ ಆರಂಭವಾದ ಸಂಧರ್ಭದಲ್ಲಿ ಕಾಂಪೌಂಡ್‌ ನಿರ್ಮಿಸಲಾಗಿತ್ತು. ಸದ್ಯ 15ನೇ ಹಣಕಾಸಿನಲ್ಲಿ ಕಾಂಪೌಂಡ್‌ ತೆರವು ಕಾರ್ಯಚರಣೆ ಆರಂಭಿಸಲಾಗಿದೆ. ನಂತರ ಸುತ್ತಲು ಗ್ರೀಲ್ ಅಳವಡಿಸುವ ಯೋಜನೆ  ಹಾಕಿಕೊಳ್ಳಲಾಗಿದೆ. ಇದರಿಂದ ಪಟ್ಟಣದ ಅಂದ ಹೆಚ್ಚುವುದರೊಂದಿಗೆ  ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಬಿಳಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದರು.

ADVERTISEMENT

ಪುರಸಭೆ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ, ಪುರಸಭೆ ಹಾಗೂ ಪೊಲೀಸ್‌ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.