ADVERTISEMENT

ಬಸವ ತತ್ವ ಉಸಿರಾಗಿಸಿಕೊಂಡಿದ್ದ ಅಕ್ಕ ಅನ್ನಪೂರ್ಣ: ಎ.ಎಸ್.ಪಟ್ಟಣಶೆಟ್ಟಿ

ಸಂತಾಪ ಸಭೆ

​ಪ್ರಜಾವಾಣಿ ವಾರ್ತೆ
Published 29 ಮೇ 2024, 14:25 IST
Last Updated 29 ಮೇ 2024, 14:25 IST
ನಾಲತವಾಡದ ಪರಶುರಾಮ ತತಬೀರಿ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಕ ಅನ್ನಪೂರ್ಣಗೆ ನುಡಿನಮನ ಸಲ್ಲಿಸಲಾಯಿತು
ನಾಲತವಾಡದ ಪರಶುರಾಮ ತತಬೀರಿ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಕ ಅನ್ನಪೂರ್ಣಗೆ ನುಡಿನಮನ ಸಲ್ಲಿಸಲಾಯಿತು   

ನಾಲತವಾಡ: ‘ವಚನ ಸಾಹಿತ್ಯದ ಅನುಭಾವಿಗಳಾಗಿ ಮತ್ತು ಉತ್ತಮ ಪ್ರವಚನಕಾರರಾಗಿ ಬಸವ ತತ್ವವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡು ಬಾಳಿ ಬೆಳಗಿದ ಮಹಾನ್ ಅನುಭಾವಿ ಅಕ್ಕ ಅನ್ನಪೂರ್ಣ ಹಂಗರಗಿ ಅವರ ನಿಧನದಿಂದ ಇಡೀ ಬಸವ ಬಳಗಕ್ಕೆ ನೋವಾಗಿದೆ’ ಎಂದು ನಾಲತವಾಡದ ಬಸವ ಕೇಂದ್ರದ ಗೌರವಾಧ್ಯಕ್ಷರಾದ ಎ.ಎಸ್.ಪಟ್ಟಣಶೆಟ್ಟಿ ಶೋಕ ವ್ಯಕ್ತಪಡಿಸಿದರು.

ನಾಲತವಾಡದ ದೇಶಮುಖರ ಓಣಿಯ ಪರಶುರಾಮ ತತಬೀರಿ ಅವರ ಮನೆಯಲ್ಲಿ ಈಚೆಗೆ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ, ಬೀದರ್‌ನ ಬಸವ ಪೀಠದ ಗುರು ಅಕ್ಕ ಅನ್ನಪೂರ್ಣ ಅವರ ನಿಧನದ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡಿದರು.

‘ವ್ಯಕ್ತಿಗೆ ಪಟ್ಟಾಭಿಷೇಕ ಸಂಪ್ರದಾಯ ಬಿಟ್ಟು ವಚನಗಳಿಗೆ ಪಟ್ಟಾಭಿಷೇಕ ಮಾಡುವ ಪದ್ಧತಿ ಅನುಸರಿಸಿದ್ದರು. ನಾಲತವಾಡದ ಶರಣ ವೀರೇಶ್ವರ ಮಠದಲ್ಲಿ ಒಂದು ತಿಂಗಳ ಬಸವ ತತ್ವ ಪ್ರವಚನ ನೀಡಿದ್ದ ಅವರು, ನಮ್ಮ ಜಿಲ್ಲೆಯ ಮಹಾನ್ ಚೇತನ. ಅವರ ಸೇವೆ ಮತ್ತು ಪರಿಶ್ರಮದಿಂದ ಕಟ್ಟಿರುವಂತಹ ಬಸವ ಸೇವಾ ಪ್ರತಿಷ್ಠಾನ ಬಸವ ಧರ್ಮ ಕ್ಷೇತ್ರದಂತಿದೆ’ ಎಂದರು.

ADVERTISEMENT

ಈ ವೇಳೆ ಮಲ್ಲಿಕಾರ್ಜುನ ಹುಣಸಗಿ, ಅಮರೇಶ ಗಂಗನಗೌಡರ, ಎಸ್.ಎನ್.ಕಂಗಳ, ಬಸವರಾಜ ಪೂಜಾರಿ, ಗಂಗಣ್ಣ ಜಾವಳಗೇರಿ ಅಂಬಿಗರ ಚೌಡಯ್ಯನವರ ವಚನ ನಿರ್ವಚನ ಮಾಡಿದರು. ಬಸವರಾಜ ತತಬೀರಿ, ಸಂಗಣ್ಣ ದುದ್ದಗಿ, ಶಿವಪುತ್ರಪ್ಪ ತಾಳಿಕೋಟಿ, ನಿಂಗಪ್ಪ ಅಗ್ನಿ, ಸಂಗಣ್ಣ ದುದ್ದಗಿ, ರವಿ ಶೀರಿ, ಮಂಜುನಾಥ ಗಣಾಚಾರಿ, ಗುಂಡಪ್ಪ ಮಾವಿನತೋಟ, ಈಶ್ವರ ಕುಂಟೋಜಿ, ಬಸಣ್ಣ ಹಾವರಗಿ, ಶರಣು ತುಪ್ಪದ ಇದ್ದರು.

ನಾಲತವಾಡದ ಪರಶುರಾಮ ತತಬೀರಿ ಇವರ ಮನೆಯಲ್ಲಿ ಅಕ್ಕ ಅನ್ನಪೂರ್ಣಗೆ ನುಡಿ ನಮನ ಸಲ್ಲಿಸಿದ ಎ.ಎಸ್.ಪಟ್ಟಣಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.