ADVERTISEMENT

ನಾಲತವಾಡ | ಮೊಸಳೆ ಸೆರೆ: ನಿಟ್ಟುಸಿರು ಬಿಟ್ಟ ಜನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 14:42 IST
Last Updated 30 ಜೂನ್ 2024, 14:42 IST
ನಾಲತವಾಡ: ಮೊಸಳೆಯನ್ನು ಹಿಡಿದ ಅಧಿಕಾರಿಗಳು ಹಾಗೂ ಸ್ಥಳೀಯ ಯುವಕರು
ನಾಲತವಾಡ: ಮೊಸಳೆಯನ್ನು ಹಿಡಿದ ಅಧಿಕಾರಿಗಳು ಹಾಗೂ ಸ್ಥಳೀಯ ಯುವಕರು   

ನಾಲತವಾಡ: ಸಮೀಪದ ಬಂಗಾರಗುಂಡ ಕೃಷ್ಣಾ ನದಿ ಹಿನ್ನೀರಿನ ಪ್ರದೇಶದಲ್ಲಿ ಕಳೆದ 2 ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೀಡು ಬಿಟ್ಟು ಸಾರ್ವಜನಿಕರು ಹಾಗೂ ಗ್ರಾಮಸ್ಥರನ್ನು ನಿದ್ದೆಗೇಡಿಸಿದ್ದ ಮೊಸಳೆಯನ್ನು ಅರಣ್ಯ ಇಲಾಖೆಯವರು ಸ್ಥಳೀಯ ಯುವಕರ ಸಹಾಯದಿಂದ ಸೆರೆ ಹಿಡಿದಿದ್ದಾರೆ.

ನದಿ ತೀರದಲ್ಲಿ ಭಯ ಹುಟ್ಟಿಸಿದ್ದ ಮೊಸಳೆಯ ಪರಿಣಾಮ ಗ್ರಾಮಸ್ಥರು ಭಯದಲ್ಲೇ ಸಂಚರಿಸುವಂತಾಗಿತ್ತು. ಶನಿವಾರ ಸಂಜೆ ಮೊಸಳೆಯನ್ನು ಹಿಡಿದು ಅದರ ಮರಿಗಳನ್ನು ನದಿಗೆ ಬಿಡಲಾಗಿದೆ ಎಂದು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT