ADVERTISEMENT

ವಿಜಯಪುರ | 'ಜಿಲ್ಲೆಯ 2.50 ಲಕ್ಷ ರೈತರ ಖಾತೆಗೆ ಬೆಳೆಹಾನಿ ಪರಿಹಾರ'

​ಪ್ರಜಾವಾಣಿ ವಾರ್ತೆ
Published 15 ಮೇ 2024, 16:15 IST
Last Updated 15 ಮೇ 2024, 16:15 IST
ಟಿ.ಭೂಬಾಲನ್
ಟಿ.ಭೂಬಾಲನ್   

ವಿಜಯಪುರ: ಮುಂಗಾರು ವೈಫಲ್ಯ ಹಾಗೂ ಮಳೆ ಕೊರತೆಯಿಂದಾಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ತಾಲ್ಲೂಕು ಎಂದು ಘೋಷಿಸಿದ್ದು, ಜಿಲ್ಲೆಯ ಬೆಳೆಹಾನಿಯಾದ ರೈತರ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಪರಿಹಾರ ಹಣ ಜಮೆ ಮಾಡಲಾಗುತ್ತಿದ್ದು, ಜಿಲ್ಲೆಯ 2,50,063 ರೈತರಿಗೆ ₹360.10 ಕೋಟಿ ಹಣವನ್ನು ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ.

ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮೆಯಾಗಿರುವ ಕುರಿತು https://parihara.karnataka.gov.in/service92/ ಜಾಲತಾಣದಿಂದ ಪರಿಶೀಲಿಸಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ. 

ಸಹಾಯವಾಣಿ: ಜಿಲ್ಲಾಧಿಕಾರಿಗಳ ಕಚೇರಿ ವಿಜಯಪುರ 08352- 221261 ಹಾಗೂ  ಟೋಲ್ ಫ್ರೀ ಸಂಖ್ಯೆ 1077, ಉಪ ವಿಭಾಗಾಧಿಕಾರಿಗಳು ವಿಜಯಪುರ 083521- 295286, ಉಪವಿಭಾಗಾಧಿಕಾರಿಗಳು ಇಂಡಿ 08359- 225003, ಉಪನಿರ್ದೇಶಕರು ತೋಟಗಾರಿಕೆ ಇಲಾಖೆ, ವಿಜಯಪುರ 08352- 250244 ಸಂಪರ್ಕಿಸಬಹುದಾಗಿದೆ.

ADVERTISEMENT

ಜೊತೆಗೆ ವಿಜಯಪುರ ತಹಶೀಲ್ದಾರ್ ಮೊ. 08352- 355731, ಬಬಲೇಶ್ವರ ತಹಶೀಲ್ದಾರ ಮೊ.8310504205, 9686073390, ತಿಕೋಟಾ ತಹಶೀಲ್ದಾರ್ ಮೊ.87624 80811, 94805 32696, ಬಸವನಬಾಗೇವಾಡಿ ತಹಶೀಲ್ದಾರ್ ಮೊ.80504 26663, 91084 82599, ನಿಡಗುಂದಿ ತಹಶೀಲ್ದಾರ್ ಮೊ.70191 78075,99026 34186, ಕೊಲ್ಹಾರ ತಹಶೀಲ್ದಾರ್ ದೂ.08426-200252, ಮುದ್ದೇಬಿಹಾಳ ತಹಶೀಲ್ದಾರ್ 08356- 220227, ತಾಳಿಕೋಟೆ ತಹಶೀಲ್ದಾರ ಮೊ.94497 52854, ಇಂಡಿ ತಹಶೀಲ್ದಾರ್ ದೂ.08359- 225020, ಚಡಚಣ ತಹಶೀಲ್ದಾರ್ ಮೊ. 94839 52337, 97401 83529, ಸಿಂದಗಿ ತಹಶೀಲ್ದಾರ್ ದೂ.08488-221235, ದೇವರಹಿಪ್ಪರಗಿ ತಹಶೀಲ್ದಾರ್ 08424-283222, ಆಲಮೇಲ ತಹಶೀಲ್ದಾರ್ ಮೊ.7353343228, ವಿಪತ್ತು ನಿರ್ವಹಣೆಗಾರರ ಮೊ.7019682740 ಸಂಖ್ಯೆಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. 

ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿ ಕಡ್ಡಾಯವಾಗಿರುವುದರಿಂದ ಇದುವರೆಗೆ ಫ್ರೂಟ್ಸ್ ಐಡಿ ಮಾಡಿಕೊಳ್ಳದ ರೈತರು ಕೂಡಲೇ ತಮ್ಮ ಆಧಾರ, ಬ್ಯಾಂಕ್ ಖಾತೆ ವಿವರ ಹಾಗೂ ಪಹಣಿ ಮಾಹಿತಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಫ್ರೂಟ್ಸ್ ಐಡಿ ಮಾಡಿಕೊಳ್ಳಲು ಮನವಿ ಮಾಡಿಕೊಳ್ಳಲಾಗಿದ್ದು, ಫ್ರೂಟ್ಸ್ ಐಡಿ ಇಲ್ಲದ ರೈತರು ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.