ADVERTISEMENT

ಬಸವನ ಬಾಗೇವಾಡಿ | ಆರೋಗ್ಯ ಕವಚ ವಾಹನದಲ್ಲೇ ಹೆರಿಗೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 6:32 IST
Last Updated 12 ಜೂನ್ 2020, 6:32 IST
ಆರೋಗ್ಯ ಕವಚ ಆಂಬುಲೆನ್ಸ್‌ನಲ್ಲಿಯೇ ಹೆರಿಗೆ
ಆರೋಗ್ಯ ಕವಚ ಆಂಬುಲೆನ್ಸ್‌ನಲ್ಲಿಯೇ ಹೆರಿಗೆ   

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಜಾಯವಾಡಗಿಯಿಂದ ಬಸವನ ಬಾಗೇವಾಡಿ ಆಸ್ಪತ್ರೆಗೆ ಗರ್ಭಿಣಿಯನ್ನು 108 ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುವಾಗ ವಾಹನದಲ್ಲೇ ಮಹಿಳೆಗೆ ಹೆರಿಗೆಯಾಗಿದೆ.

ಪರ್ವೀನ್ ಚಪ್ಪರಬಂದ್ ಎಂಬುವವರುಹೆಣ್ಣು‌ ಮಗುವಿಗೆ ಅಂಬುಲೆನ್ಸ್‌ನಲ್ಲೇಜನ್ಮ ನೀಡಿದ್ದಾರೆ. ತಾಯಿ‌-ಮಗು ಇಬ್ಬರು ಆರೋಗ್ಯವಾಗಿದ್ದಾರೆ.ಹೆರಿಗೆ ಬಳಿಕ ಬಸವನ‌ ಬಾಗೇವಾಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಂಬುಲೆನ್ಸ್ ಸಿಬ್ಬಂದಿ ವಿಜಯಕುಮಾರ ಹಾಗೂ ಪೈಲಟ್ ವಿಜಯ ಅವರು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.