ADVERTISEMENT

‘ಶರಣರ ಶಕ್ತಿ’ ಚಲನಚಿತ್ರ ನಿರ್ಬಂಧಕ್ಕೆ ಆಗ್ರಹ

ಬಸವಾದಿ ಶರಣರಿಗೆ ಅವಹೇಳ; ಬಸವ ಪರ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 13:25 IST
Last Updated 4 ಅಕ್ಟೋಬರ್ 2024, 13:25 IST
ಬಸವಾದಿ ಶರಣರಿಗೆ ಅವಹೇಳನ ಮಾಡಿರುವ ‘ಶರಣರ ಶಕ್ತಿ’ ಚಲನಚಿತ್ರವನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿ ಶರಣ ಸಂಸ್ಕೃತಿ ರಕ್ಷಣಾ ವೇದಿಕೆ ಹಾಗೂ ಬಸವ ಪರ ಸಂಘಟನೆಗಳ ಪದಾಧಿಕಾರಿಗಳು ವಿಜಯಪುರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು 
ಬಸವಾದಿ ಶರಣರಿಗೆ ಅವಹೇಳನ ಮಾಡಿರುವ ‘ಶರಣರ ಶಕ್ತಿ’ ಚಲನಚಿತ್ರವನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿ ಶರಣ ಸಂಸ್ಕೃತಿ ರಕ್ಷಣಾ ವೇದಿಕೆ ಹಾಗೂ ಬಸವ ಪರ ಸಂಘಟನೆಗಳ ಪದಾಧಿಕಾರಿಗಳು ವಿಜಯಪುರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು    

ವಿಜಯಪುರ: ಬಸವಾದಿ ಶರಣರಿಗೆ ಅವಹೇಳನ ಮಾಡಿರುವ ‘ಶರಣರ ಶಕ್ತಿ’ ಚಲನಚಿತ್ರವನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿ ಶರಣ ಸಂಸ್ಕೃತಿ ರಕ್ಷಣಾ ವೇದಿಕೆ ಹಾಗೂ ಬಸವ ಪರ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಸಭೆ ನಡೆಸಿದ ಮುಖಂಡರು ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಚಲನಚಿತ್ರದ ನಿರ್ದೇಶಕರು, ನಿರ್ಮಾಪಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

ನಿರ್ದೇಶಕ ದಿಲೀಪ್ ಶರ್ಮಾ, ನಿರ್ಮಾಪಕಿ ಆರಾಧನಾ ಕುಲಕರ್ಣಿಯವರು ನಿರ್ಮಿಸಿರುವ ಚಲನಚಿತ್ರ ‘ಶರಣರ ಶಕ್ತಿ’ ಸಂಪೂರ್ಣ ಬಸವಾದಿ ಶರಣರ ತತ್ವಗಳಿಗೆ ವಿರುದ್ಧವಾಗಿದ್ದು, ಅದನ್ನು ಕೂಡಲೇ ಸರ್ಕಾರ, ಚಲನಚಿತ್ರ ವಾಣಿಜ್ಯ ಮಂಡಳಿ, ಸೆನ್ಸಾರ್ ಮಂಡಳಿಗಳು ಮಧ್ಯಪ್ರವೇಶಿಸಿ ಮರು ಸೆನ್ಸಾರ್ ಮಾಡಬೇಕು ಮತ್ತು ಅಲ್ಲಿಯವರೆಗೆ ಆ ಚಿತ್ರವನ್ನು ಯಾವುದೇ ಮಾಧ್ಯಮಕ್ಕೆ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದರು.

ADVERTISEMENT

ಅಕ್ಕ ನಾಗಮ್ಮನವರಿಗೆ ಅವಹೇಳನ ಮಾಡಿರುವ ಚಿತ್ರ ತಂಡದ ಮೇಲೆ ಕ್ರಿಮಿನಲ್ ಮೊಕದಮೆ ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇಂಗಳೇಶ್ವರದ ವಚನ ಶಿಲಾಮಂಟಪದ ಚನ್ನಬಸವ ಸ್ವಾಮೀಜಿ ಮಾತನಾಡಿ, ಕೂಡಲೇ ಸರ್ಕಾರ ಈ ಚಲನಚಿತ್ರವನ್ನು ನಿಷೇಧಿಸಬೇಕು ಎಂದರು.

ರಾಷ್ಟ್ರೀಯ ಬಸವಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರವಿಕುಮಾರ ಬಿರಾದಾರ ಮಾತನಾಡಿ, ಶರಣರಿಗೆ ಅವಹೇಳನ ಮಾಡಿರುವ ಶರಣರ ಶಕ್ತಿ ಚಲನಚಿತ್ರವನ್ನು ನಿರ್ಬಂಧಿಸಿ, ನಿರ್ದೇಶಕ ಹಾಗೂ ನಿರ್ಮಾಪಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಈ ರೀತಿ ಬಸವಾದಿ ಶರಣರ ತತ್ವದ ಮೇಲಿನ ದಾಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ವೈದಿಕ ಸಂಘಟನೆಗಳ ಕೈವಾಡ ಎದ್ದು ಕಾಣುತ್ತಿದೆ. ನ್ಯಾಯ ಸಿಗುವವರೆಗೂ ಲಿಂಗಾಯತ ಸಮುದಾಯ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮನಗೂಳಿ ವಿರಕ್ತ ಮಠದ ಶರಬಯ್ಯ ಸ್ವಾಮಿ, ಚಂದ್ರಕಲಾ ಗುಣದಾಳ, ಅಖಿಲ ಭಾರತ ವೀರಶೈವ ಮಹಾ ಸಭಾ ಜಿಲ್ಲಾಧ್ಯಕ್ಷ ವಿ.ಸಿ.ನಾಗಠಾಣ ಮಾತನಾಡಿದರು.

ಬಸವಪರ ಸಂಘಟನೆಗಳ ಪಧಾಧಿಕಾರಿಗಳಾದ ಪ್ರಕಾಶ ಕಶೆಟ್ಟಿ, ಸಂಗನಗೌಡ ಚಿಕ್ಕೊಂಡ, ಮಹಾಂತೇಶ ಮಡಿಕೇಶ್ವರ, ಎಸ್. ಬಿ. ಕಲ್ಬುರ್ಗಿ, ಬಸವರಾಜ ಕೊಂಡಗುಳಿ, ಅಕ್ಕಮಹಾದೇವಿ ಬುರ್ಲಿ, ಜಿ.ಬಿ. ಸಾಲಕ್ಕಿ, ಗಂಟೆಪ್ಪಗೋಳ, ಶರಣಬಸವ ಅವಜಿ, ಡಾ.ಮೀನಾಕ್ಷಿ ಪಾಟೀಲ, ಹಣಮಂತ ಚಿಂಚಲಿ, ಪ್ರಭುಗೌಡ ಪಾಟೀಲ, ಸಂಗಪ್ಪ ತಡವಲಗ, ರಾಜೇಶ್ವರಿ ಯರನಾಳ, ಬಸವರಾಜ ಬಾಗೇವಾಡಿ, ಪಂಚಾಕ್ಷರಿ ಕಾಳಹಸ್ತೇಶ್ವರ ಮಠ, ಬಸವರಾಜ ನಾಯ್ಕೋಡಿ,  ವಿವೇಕಾನಂದ ಕಲ್ಯಾಣಶೆಟ್ಟಿ,  ಮಹಾಂತೇಶ ಆಡಿಗೊಂಡ, ಚನ್ನು ಕಟ್ಟಿಮನಿ, ರಾಜಶೇಖರ ಯರನಾಳ, ಮಲ್ಲಿಕಾರ್ಜುನ ಹಳ್ಳಿ, ಹನಮಂತ ಶಿವಡಿಹತ್ತಿ, ನೀಲಕಂಠ ಹಳ್ಳಿ, ರೇವನಸಿದ್ದಪ್ಪ ಅಳ್ಳಗಿ, ವೀರಣ್ಣ ಮರ್ತೂರ, ಶಾಂತಪ್ಪ ಬೋರಗಿ, ಪ್ರಕಾಶ ಕುಂಬಾರ, ಶ್ರೀಶೈಲ ಬಿರಾದಾರ, ಶಿವಲಿಂಗ ಕಲಬುರ್ಗಿ, ನಿಂಗಪ್ಪ ಸಂಗಾಪುರ, ಮಹಾದೇವಿ ಗೋಕಾಕ, ಬಸವರಾಜ ಸುಳಿಭಾವಿ, ಅನಿಲ ಹೊಸಮನಿ, ನಾಗರಾಜ ಲಂಬು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಿರಂತರವಾಗಿ ಶರಣರ ತತ್ವಗಳ ಮೇಲೆ ಪಟ್ಟಭದ್ರ ಹಿತಾಸಕ್ತಿಗಳಿಂದ ದಾಳಿ ಆಗುತ್ತಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲ
-ಸಿದ್ದಲಿಂಗ ಸ್ವಾಮೀಜಿ ವಿರಕ್ತ ಮಠ ಬಸವನ ಬಾಗೇವಾಡಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.