ADVERTISEMENT

ವಿಜಯಪುರ: ಕಂಬಿಗಳೊಂದಿಗೆ ಶ್ರೀಶೈಲಕ್ಕೆ ತೆರಳಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 15:19 IST
Last Updated 26 ಮಾರ್ಚ್ 2024, 15:19 IST
ಬಸವನಬಾಗೇವಾಡಿಯಲ್ಲಿ ಕಂಬಿಗಳೊಂದಿಗೆ ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ತೆರಳುವ ಭಕ್ತರನ್ನು ಕಂಬಿಗಳ ಮೆರವಣಿಗೆಯೊಂದಿಗೆ ಬೀಳ್ಕೊಡಲಾಯಿತು
ಬಸವನಬಾಗೇವಾಡಿಯಲ್ಲಿ ಕಂಬಿಗಳೊಂದಿಗೆ ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ತೆರಳುವ ಭಕ್ತರನ್ನು ಕಂಬಿಗಳ ಮೆರವಣಿಗೆಯೊಂದಿಗೆ ಬೀಳ್ಕೊಡಲಾಯಿತು   

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ ಮಲ್ಲಯ್ಯನ ಭಕ್ತರು ಪಾದಯಾತ್ರೆ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಕಂಬಿಗಳೊಂದಿಗೆ ಪ್ರಯಾಣ ಬೆಳೆಸಿದರು.

ಪಾದಯಾತ್ರೆಗೂ ಮುನ್ನ ಪಟ್ಟಣದ ಬಸವೇಶ್ವರ ದೇವಸ್ಥಾನದ ಮೂಲ ಜೀರ್ಣೋದ್ಧಾರಕ ದಿ.ಶಂಕ್ರೆಪ್ಪ ಸಿಂಹಾಸನ ಪ್ರತಿಮೆ ಸಮೀಪ ಶ್ರೀಶೈಲ ಮಲ್ಲಿಕಾರ್ಜುನ ಕಂಬಿಗಳಿಗೆ ಗುರುಸಂಗಯ್ಯ ಮಠಪತಿ, ವೀರಗಂಗಾಧರಯ್ಯ ಕಾಳಹಸ್ತೇಶ್ವರಮಠ ಸೇರಿದಂತೆ ಅನೇಕ ಗುರುಗಳಿಂದ ಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ಮಲ್ಲಯ್ಯನ ಕಂಬಿ ಹಾಡುಗಳನ್ನು ಭಕ್ತರು ಹಾಡಿದರು. ಮಂಗಳಾರತಿ ನಂತರ ಕಂಬಿ ಕಟ್ಟೆಗೆ ತೆರಳಿದರು. ಉಪಹಾರ ಸ್ವೀಕರಿಸಿದ ನಂತರ ಪಾದಯಾತ್ರಿಗಳಿಗೆ ಹಾಗೂ ಕಂಬಿಗಳಿಗೆ ಬೀಳ್ಕೊಡಲಾಯಿತು. ಕೆಲವರು ಹೂವಿನಹಿಪ್ಪರಗಿ ಗ್ರಾಮದವರಿಗೂ ತೆರಳಿ ಬೀಳ್ಕೊಟ್ಟರು. ಪಾದಯಾತ್ರೆ ತೆರಳುವ ಮಾರ್ಗದಲ್ಲಿ ಕುಡಿಯುವ ನೀರು, ದಾಸೋಹ, ವೈದ್ಯಕೀಯ ವ್ಯವಸ್ಥೆಗಾಗಿ ಸಾಮಗ್ರಿಗಳನ್ನು ಹೊತ್ತ ವಾಹನ ತೆರಳಿತು.

ADVERTISEMENT

ಬಸವರಾಜ ಹಾರಿವಾಳ, ಸದಪ್ಪ ಅರಕೇರಿ, ಶ್ರೀಶೈಲ ಮಠಪತಿ, ಮಲ್ಲಯ್ಯ ನರಸಲಗಿಮಠ, ಬಸಪ್ಪ ಏವೂರ, ಶಿವಲಿಂಗ ಹಾರಿವಾಳ, ಬಸವಂತ ಅಡಗಿಮನಿ, ಮಹೇಶ ನಿಡಗುಂದಿ, ಎಸ್.ಎಸ್.ಬಶೆಟ್ಟಿ, ವೀರಭದ್ರಪ್ಪ ಸಂಗಮ, ರಮೇಶ ಚಿಕ್ಕೊಂಡ, ಮಹೇಶ ಜಗದಾಳೆ, ಮಲ್ಲಪ್ಪ ಕೂಡಗಿ, ಬಸವರಾಜ ಅಂಗಡಿ, ಬಾಬು ನಿಡಗುಂದಿ, ಶೇಖಪ್ಪ ಕ್ವಾಟಿ, ಮಹೇಶ ಜಗದಾಳೆ, ಮೀರಾಸಾಬ ಕೊರಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.