ವಿಜಯಪುರ: ನಾಡಿನ ವಿವಿಧ ಭಾಗಗಳಲ್ಲಿ ಹಲವು ಕಲಾ ಪ್ರಕಾರಗಳು ಮತ್ತು ಮಾಧ್ಯಮಗಳು ಪ್ರಚಲಿತವಿದ್ದು, ಕಲಾವಿದರ ಈ ಒಡನಾಟದಿಂದ ನೂತನ ಕಲಾ ಪ್ರಯತ್ನಗಳು ವಿನಿಮಯವಾಗುತ್ತದೆ ಎಂದು ಕಲಾವಿದ ಪಿ.ಎಸ್.ಕಡೇಮನಿ ಹೇಳಿದರು.
ನಗರದ ಸಿದ್ಧಲಿಂಗ ಫೈನ್ ಆರ್ಟ್ ಸೊಸೈಟಿಯ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿರುವ ಕಲಾವಿದ ಸಮೀರ್ ರಾವ್ ಮುದ್ರಣ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಕೆಲ ಜನಪ್ರಿಯ ಕಲಾ ಮಾಧ್ಯಮಗಳು ಒಂದೊಂದು ದಶಕಗಳವರೆಗಷ್ಟೇ ಬಳಸಲ್ಪಟ್ಟು, ಕ್ರಮೇಣ ಅವುಗಳ ಬಳಕೆ ಕ್ಷೀಣಿಸುತ್ತಾ ಹೋಗುತ್ತದೆ. ಆದರೆ, ಕಲಾವಿದರು ಒಂದೇ ಮಾಧ್ಯಮದಲ್ಲಿ ಕಲಾ ರಚನೆಗೆ ಬಹುಕಾಲ ತೊಡಗುವುದು ವಿಶೇಷ ಎಂದರು.
ಕಲಾ ಪ್ರದರ್ಶನವು ಜೂ.27 ರಿಂದ 29ರವರೆಗೆ ಮೂರು ದಿನ ಜರುಗಲಿದೆ. ಜತೆಗೆ ಸಿದ್ದಲಿಂಗ ಫೈನ್ ಆರ್ಟ್ ಸೊಸೈಟಿ ವತಿಯಿಂದ ಕಲಾವಿದ ಲಿಂಗರಾಜ ಕಾಚಾಪುರ ಮತ್ತು ಸಮೀರ್ ರಾವ್ ನೇತೃತ್ವದಲ್ಲಿ ಉಡ್-ಬ್ಲಾಕ್ ಮುದ್ರಣ ಕಾರ್ಯಾಗಾರ ಜೂ.30ರವರೆಗೆ ನಡೆಯಲಿದೆ.
ಕಲಾವಿದರಾದ ವಿಧ್ಯಾದರ ಸಾಲಿ, ಎಂ.ಎಂ.ಕನ್ನೂರ್, ಜಿ.ಎಸ್.ಪಾಟೀಲ, ರಮೇಶ ಚವ್ಹಾಣ, ಆಂನಂದ ಝಂಡೆ, ಲಿಂಗರಾಜ ಕಾಚಾಪುರ, ಎಂ.ಎಂ.ತಿಕೋಟ, ಪೂಜಾ ಪೇಸ್ಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.