ADVERTISEMENT

ಆಲಮಟ್ಟಿ: ವಿದ್ಯುತ್ ಉತ್ಪಾದನೆ ಆರಂಭ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 14:27 IST
Last Updated 11 ಜುಲೈ 2024, 14:27 IST
ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ಗುರುವಾರದಿಂದ 3500 ಕ್ಯುಸೆಕ್ ನೀರು ಹೊರಬಿಡುವ ದೃಶ್ಯ
ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ಗುರುವಾರದಿಂದ 3500 ಕ್ಯುಸೆಕ್ ನೀರು ಹೊರಬಿಡುವ ದೃಶ್ಯ   

ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಮುಂಜಾಗ್ರತೆಯ ಕ್ರಮವಾಗಿ ಜಲಾಶಯ ಭರ್ತಿಗೂ ಮುನ್ನವೇ ನಾರಾಯಣಪುರ ಜಲಾಶಯಕ್ಕೆ ನೀರು ಬಿಡಲು ಗುರುವಾರದಿಂದ ಆರಂಭಿಸಲಾಗಿದೆ.

‘ಗುರುವಾರ ಮಧ್ಯಾಹ್ನ 12 ಗಂಟೆಯಿಂದ 3,500 ಕ್ಯುಸೆಕ್ ನೀರನ್ನು ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ.
ರಾತ್ರಿಯ ವೇಳೆಗೆ ಒಳಹರಿವು ಹೆಚ್ಚಾದರೆ ಮಾತ್ರ ಹೊರಹರಿವನ್ನು 7,500 ಕ್ಯುಸೆಕ್ ಗೆ ಹೆಚ್ಚಿಸಲಾಗುವುದು’ ಎಂದು ಆಲಮಟ್ಟಿ ಜಲಾಶಯದ ಮೂಲಗಳು ತಿಳಿಸಿವೆ.

‘519.60 ಮೀ ಎತ್ತರದ ಜಲಾಶಯದಲ್ಲಿ ಗುರುವಾರ 517 ಮೀ ವರೆಗೆ ನೀರು ಸಂಗ್ರಹವಾಗಿದೆ. ಗುರುವಾರ ಜಲಾಶಯದ ಒಳಹರಿವು 69,492 ಕ್ಯುಸೆಕ್ ಇದ್ದು ಬುಧವಾರಕ್ಕಿಂತ (84,645 ಕ್ಯುಸೆಕ್) ಒಳಹರಿವು ಗುರುವಾರ ಕುಸಿತವಾಗಿದೆ. ಗುರುವಾರ ಸಂಜೆ ಒಳಹರಿವು ಮತ್ತಷ್ಟು ಇಳಿಕೆಯಾಗಿದೆ’ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ADVERTISEMENT

‘123.081 ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 84.58 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಗುರುವಾರ ಮಳೆಯ ಅಬ್ಬರ ಕಡಿಮೆಯಾಗಿದ್ದು, ಶುಕ್ರವಾರ ಒಳಹರಿವು ಇನ್ನಷ್ಟು ಕಡಿಮೆಯಾಗಲಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ನಾರಾಯಣಪುರ ಜಲಾಶಯದ ಭರ್ತಿಗೂ ಇನ್ನೂ 13 ಟಿಎಂಸಿ ಅಡಿ ನೀರಿನ ಕೊರತೆಯಿದ್ದು, ಹೀಗಾಗಿ ಆ ಜಲಾಶಯ ಭರ್ತಿಗೆ ಆಲಮಟ್ಟಿಯಿಂದ ನೀರು ಬಿಡಲಾಗುತ್ತಿದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದರು.

ಆಲಮಟ್ಟಿ ಹೊರಹರಿವು ಆರಂಭಿಸಿರುವುದರಿಂದ ಕೆಲ ದಿನಗಳಿಂದ ಬಂದಿದ್ದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರ ಗುರುವಾರದಿಂದ ಆರಂಭಗೊಂಡಿದೆ.

‘55 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಒಂದು ಘಟಕ ಕಾರ್ಯಾರಂಭ ಮಾಡಿದ್ದು 3,500 ಕ್ಯುಸೆಕ್ ನೀರು ಬಿಟ್ಟಿದ್ದರಿಂದ 25 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹೊರಹರಿವು ಹೆಚ್ಚಳಗೊಂಡರೇ ಮತ್ತಷ್ಟು ವಿದ್ಯುತ್ ಉತ್ಪಾದನೆಯಾಗಲಿದೆ’ ಎಂದು ಕೆಪಿಸಿಎಲ್ ಆಲಮಟ್ಟಿ ಘಟಕದ ಸೂಪರಿಂಟೆಂಡೆಂಟ್ ಎಂಜಿನಿಯರ್ ಚಂದ್ರಶೇಖರ ದೊರೆ ತಿಳಿಸಿದರು.

ಈ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 2024 ರಿಂದ) ನಾರಾಯಣಪುರ ಜಲಾಶಯಕ್ಕೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ವಿದ್ಯುತ್ ಘಟಕದ ಮೂಲಕ ಸ್ವಲ್ಪ ನೀರು ಆಲಮಟ್ಟಿ ಜಲಾಶಯದಿಂದ ಬಿಟ್ಟ ಕಾರಣ ಇಲ್ಲಿಯವರೆಗೆ 5.5 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದೆ ಎಂದು ಅವರು ತಿಳಿಸಿದರು.
 
‘ನಾರಾಯಣಪುರ ಜಲಾಶಯ ಇನ್ನೂ‌ ಭರ್ತಿಯಾಗಿಲ್ಲ. ಮುಂಜಾಗ್ರತೆಯ ಕ್ರಮವಾಗಿ ಜಲಾಶಯದ ಭರ್ತಿಗೂ ಮುನ್ನವೇ 3,500 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಈ ನೀರು ನಾರಾಯಣಪುರದಲ್ಲಿ ಸಂಗ್ರಹವಾಗಲಿದೆ’ ಆಲಮಟ್ಟಿ ಅಣೆಕಟ್ಟು ವಲಯ ಪ್ರಭಾರಿ ಸೂಪರಿಂಟೆಂಡೆಂಟ್ ಎಂಜಿನಿಯರ್
ಬಿ.ಎಸ್. ಪಾಟೀಲ ತಿಳಿಸಿದ್ದಾರೆ.

ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ಗುರುವಾರದಿಂದ 3500 ಕ್ಯುಸೆಕ್ ನೀರು ಹೊರಬಿಡುವ ದೃಶ್ಯ
ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ಗುರುವಾರದಿಂದ 3500 ಕ್ಯುಸೆಕ್ ನೀರು ಹೊರಬಿಡುವ ದೃಶ್ಯ
ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ಗುರುವಾರದಿಂದ 3500 ಕ್ಯುಸೆಕ್ ನೀರು ಹೊರಬಿಡುವ ದೃಶ್ಯ
ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ಗುರುವಾರದಿಂದ 3500 ಕ್ಯುಸೆಕ್ ನೀರು ಹೊರಬಿಡುವ ದೃಶ್ಯ
ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ಗುರುವಾರದಿಂದ 3500 ಕ್ಯುಸೆಕ್ ನೀರು ಹೊರಬಿಡುವ ದೃಶ್ಯ
ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಹೊರ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.