ಬಸವನ ಬಾಗೇವಾಡಿ: ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುವಾಗ ಕೋವಿಡ್ ಪಾಸಿಟಿವ್ ವರದಿ ಬಂದಾಗ ಭಯಪಡದೇ ಪೌಷ್ಠಿಕಾಂಶವುಳ್ಳ ಆಹಾರ ಸೇವನೆಯೊಂದಿಗೆ ವೈದ್ಯರ ಸಲಹೆಯನ್ನು ಪಾಲಿಸಿದ್ದರಿಂದ ಬೇಗನೆ ಗುಣಮುಖರಾಗಲು ಸಾಧ್ಯವಾಯಿತು ಎಂದು ಇಲ್ಲಿನ ಕಿರಿಯ ಮಹಿಳಾ ಆರೋಗ್ಯಾಧಿಕಾರಿ ಎಂ.ಬಿ.ಬೇವನೂರ ಹೇಳಿದರು.
ಆರಂಭದಲ್ಲಿ ಜ್ವರದ ಲಕ್ಷಣಗಳು ಕಂಡು ಬಂದ ತಕ್ಷಣ ಜುಲೈ 3 ರಂದು ಗಂಟಲು ದ್ರವ ಪರೀಕ್ಷೆಗೆ ಒಳಪಟ್ಟೆ. ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲೇ ಪಾಸಿಟಿವ್ ಬಂದದ್ದು ಒಂದಷ್ಟು ಬೇಸರ ಏನಿಸಿದರೂ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆದು ಬೇಗ ಗುಣಮುಖವಾಗಿ ವಾರಿಯರ್ಸ್ ಆಗಿ ಮತ್ತೆ ಕಾರ್ಯ ನಿರ್ವಹಿಸಲು ಸಜ್ಜಾಗುತ್ತಿದ್ದೇನೆ ಎಂದರು.
‘ಜುಲೈ17 ರಂದು ರ‍್ಯಾಪಿಡ್ ಟೆಸ್ಟ್ ಮಾಡಿಸಿದಾಗ ನೆಗಟಿವ್ ವರದಿ ಬಂದಿದೆ. ಈಗ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಅಂತರ ಕಾಯ್ದುಕೊಂಡು ಹೋಂಕ್ವಾರಂಟೈನಲ್ಲಿ ಇರುವೆ ಎಂದು ತಿಳಿಸಿದರು.
ಕೋವಿಡ್ಬಂದ ಆರಂಭದ ದಿನಗಳಲ್ಲಿ ಈ ರೋಗದ ಬಗ್ಗೆ ಇದ್ದ ಭಯದ ವಾತಾವರಣ ಈಗಿಲ್ಲ. ಕೋವಿಡ್ ಪಾಸಿಟಿವ್ ಬಂದವರು ಹೆಚ್ಚು ಗುಣಮುಖರಾಗುತ್ತಿರುವ ವರದಿಗಳನ್ನು ನೋಡಿ ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚಿತು. ಸ್ಯಾನಿಟೈಸರ್, ಮಾಸ್ಕ್, ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ಸೋಂಕು ಸಮೀಪಕ್ಕೆ ಬಾರದು ಎಂದರು.
‘ನನಗೆ ಕೋವಿಡ್ ಪಾಸಿಟಿವ್ಬಂದಿರುವುದು ತಿಳಿದಾಗಗಣಪತಿ ವೃತ್ತದ ಬಡಾವಣೆ ಜನರು ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಆತ್ಮ ವಿಶ್ವಾಸ ತುಂಬಿದರು. ಕೋವಿಡ್‌ಬಂದವರಿಗೆ ಆತ್ಮ ವಿಶ್ವಾಸ ತುಂಬುವ ಮೂಲಕ ಗುಣಮುಖರಾಗಲು ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.