ವಿಜಯಪುರ: ಜಾನಪದ ಕಲೆ, ಸಂಸ್ಕೃತಿ ನಮ್ಮ ಬದುಕಿಗೆ ದಾರಿದೀಪವಾಗಿದೆ ಎಂದು ಬಬಲೇಶ್ವರದ ಡಾ. ಮಹಾದೇವ ಶಿವಾಚಾರ್ಯ ಹೇಳಿದರು.
ಹಿಟ್ಟಿನಹಳ್ಳಿ ಗ್ರಾಮದಲ್ಲಿ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಗಜಾನನ ಉತ್ಸವದ ಸುವರ್ಣ ಮಹೋತ್ಸವದಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಭಾರತೀಯ ಪರಂಪರೆ ಜಾನಪದ ಸಂಸ್ಕೃತಿ ಆಧಾರಿತವಾಗಿದೆ. ಹಿರಿಯರು ಕಟ್ಟಿದ ಗ್ರಾಮೀಣ ಜೀವನದ ಮೌಲ್ಯಗಳನ್ನು ಉಳಿಸಿಕೊಳ್ಳುವ ಅವಶ್ಯಕತೆಯಿದೆ ಎಂದರು.
ಮನಗೂಳಿ ಹಿರೇಮಠ ಅಭಿನವ ಸಂಗನಬಸವ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಣೇಶೋತ್ಸವ ಆಯೋಜನೆ ಮೂಲಕ ಬಾಲ ಗಂಗಾಧರ ತಿಲಕರು ಯವಕರಲ್ಲಿ ದೇಶಾಭಿಮಾನ ಮೂಡಿಸಿದರು ಎಂದು ಹೇಳಿದರು.
ನಾಗಠಾಣ ಶಾಸಕ ದೇವಾನಂದ ಚವ್ವಾಣ ಕಾರ್ಯಕ್ರಮ ಉದ್ಘಾಟಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಶ್ರೀಕಾಂತ ಗೊಂಗಡಿ, ವಿಜಯಕುಮಾರ ಘಾಟಗೆ, ರಾಜೇಂದ್ರ ಬಿರಾದಾರ, ಅಶೋಕ ಬಗಲಿ, ಸಾಹೇಬಗೌಡ ಶಿವನಗೌಡ ಬಿರಾದಾರ, ಮಹಿಬೂಬ ಕೋಲಾರ, ಬಸವರಾಜ ಬಿರಾದಾರ,ಅಬ್ದುಲ್ ವಾಲಿಕಾರ,ಮಲ್ಲಪ್ಪ ಬಾವಿಕಟ್ಟಿ, ಸಿದ್ದಣ್ಣ ಹೊಸಳ್ಳಿ, ಜಗನ್ನಾಥ ಶಿರಬೂರ, ಸಾಹೇಬಗೌಡ ಬಿರಾದಾರ, ಮಹಾಂತೇಶ ಹೊಸೂರು, ಡಾ.ಸುನೀಲ ಕುಸಗಲ್, ಡಾ.ಸಂಗಮೇಶ ಮೇತ್ರಿ, ಕೆ.ಸುನಂದಾ, ಆಶಾ ಬಿರಾದಾರ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.