ADVERTISEMENT

ಇಂಡಿಯಲ್ಲಿ ‘ಜಾನಪದ ಝೇಂಕಾರ’ ಶನಿವಾರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 11:36 IST
Last Updated 9 ಜೂನ್ 2023, 11:36 IST

ಇಂಡಿ: ವಿಶ್ವಚೇತನ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ಅಭಿವೃದ್ದಿ ಸಂಸ್ಥೆ ವಿಜಯಪುರ ಶಾಖೆ ಇಂಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಇಂಡಿ ಇವರ ಸಹಯೋಗದಲ್ಲಿ ಜಾನಪದ ಝೇಂಕಾರ ಹಾಡಿನ ಸಂಭ್ರಮ ಜೂನ್ 10 ರಂದು ಸಂಜೆ 5ಕ್ಕೆ ಇಂಡಿ ಪಟ್ಟಣದ ಶಂಕರ ಪಾರ್ವತಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸುವರು. ಸಾಹಿತಿ ಡಿ.ಎನ್ ಅಕ್ಕಿ ಅಧ್ಯಕ್ಷತೆ ವಹಿಸುವರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್ ನೇತೃತ್ವದ ವಹಿಸುವರು. ಇದೇ ವೇಳೆ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸನ್ಮಾನ ಸಮಾರಂಭವೂ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಶಾಂತೇಶ್ವರ ವಿಧ್ಯಾವರ್ಧಕ ಸಂಘದ ಉಪಾಧ್ಯಕ್ಷ ನೀಲಕಂಠ ಎಸ್. ಪಾಟೀಲ, ಗಂಗಾಬಾಯಿ ಗಲಗಲಿ, ಭದ್ರೀಶ .ಎನ್ ಮಹೇಶಿ, ಜೀತಪ್ಪ ಕಲ್ಯಾಣಿ, ಚಂದ್ರಶೇಖರ ರೂಗಿ, ಸಂತೋಷ ಕೊಟಿ, ಶ್ರೀಮಂತ ಲೋಣಿ, ಶಾಂತು ಶಿರಕನಹಳ್ಳಿ, ಶೇಖರ ನಾಯಕ, ರಾಜಶೇಖರ ಹೊಸಮನಿ, ಪ್ರಶಾಂತ ಕಾಳೆ, ಅಶೋಕ ಮಿಜರ್ಿ, ಶಂಕರ ಗಂಗು ಚವ್ಹಾಣ, ಮಲ್ಲನಗೌಡ ಪಾಟೀಲ, ಗಿರೀಶ ಚಾಂದಕವಟೆ, ಪ್ರಭುಗೌಡ ಬಿರಾದಾರ, ರಾಜೇಶ್ವರಿ ಕ್ಷತ್ರಿ, ದ್ರಾಕ್ಷಾಯಣಿ ಮೈದರಗಿ, ಶಶಿಕಲಾ ಅಳುರ, ಮಂಜುನಾಥ ಜುನಗೊಂಡ, ಪ್ರಭು ಹೊಸಮನಿ, ರಾಜು ಕುಲಕಣರ್ಿ, ಶರಣು ಕಾಂಬಳೆ, ಜಿ.ಜಿ ಬರಡೋಲ, ರಮೇಶ ನಾಯಕ ಆಗಮಿಸಲಿದ್ದಾರೆ ಎಂದು ಸಾಹಿತ್ಯ, ಸಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಾ. ಕಾಂತು ಇಂಡಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.