ADVERTISEMENT

ಹಲಿಗೆ ಮೇಳ: ಚಿಕ್ಕಮಣೂರ ತಂಡ ಪ್ರಥಮ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 16:05 IST
Last Updated 16 ಮಾರ್ಚ್ 2022, 16:05 IST
ವಿಜಯಪುರ ನಗರದ ಶ್ರೀರಾಮನವಮಿ ಉತ್ಸವ ಸಮಿತಿ ವತಿಯಿಂದ ಶಿವಾಜಿ ವೃತ್ತದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಹಲಿಗೆ ಅಮೃತಾನಂದ ಸ್ವಾಮೀಜಿ ಚಾಲನೆ ನೀಡಿದರು
ವಿಜಯಪುರ ನಗರದ ಶ್ರೀರಾಮನವಮಿ ಉತ್ಸವ ಸಮಿತಿ ವತಿಯಿಂದ ಶಿವಾಜಿ ವೃತ್ತದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಹಲಿಗೆ ಅಮೃತಾನಂದ ಸ್ವಾಮೀಜಿ ಚಾಲನೆ ನೀಡಿದರು   

ವಿಜಯಪುರ: ಶ್ರೀರಾಮನವಮಿ ಉತ್ಸವ ಸಮಿತಿ ವತಿಯಿಂದ ನಗರದ ಶಿವಾಜಿ ವೃತ್ತದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಹಲಿಗೆ ಮೇಳ ಆಯೋಜಿಸಲಾಗಿತ್ತು.

ಹಲಿಗೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಚಿಕ್ಕಮಣೂರ ಹಲಿಗೆ ತಂಡ, ದ್ವಿತೀಯ ಸ್ಥಾನವನ್ನು ಬಸವನ ಬಾಗೇವಾಡಿ ಕಲಾ ತಂಡ, ತೃತೀಯ ಸ್ಥಾನವನ್ನು ಜಯ ಹನುಮಾನ ಹಲಿಗೆ ತಂಡ ಪಡೆದುಕೊಂಡಿತು.

ವೈಯಕ್ತಿಕ ಸ್ಪರ್ಧೆಯಲ್ಲಿ ಮಡವಾಳಪ್ಪ ಕುಂದಗೋಳ, ಸಚಿನ್‌ ಚಲವಾದಿ, ಪರಶುರಾಮ ಚವ್ಹಾಣ, ಬಹುಮಾನ ಪಡೆದುಕೊಂಡರು.

ADVERTISEMENT

ಶ್ರೀರಾಮನವಮಿ ಉತ್ಸವ ಸಮಿತಿ ಮುಖ್ಯ ವಕ್ತಾರ ಶಿವಾನಂದ ಬಡಿಗೇರ ಮಾತನಾಡಿ, ಭಾರತೀಯ ಸಂಸ್ಕೃತಿ ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಸಂಸ್ಕೃತಿಯ ಭಾಗವಾಗಿರುವ ಹಲಿಗೆ ಹಬ್ಬವನ್ನು ಹಮ್ಮಿಕೊಂಡಿರುವುದು ಸಂತೋಷದ ವಿಷಯ ಎಂದರು.

ಮೋಹನ ಮೇಟಿ ಮಾತನಾಡಿ, ಸಮಾಜದಲ್ಲಿರುವ ಕೆಟ್ಟ ಮನಸ್ಸುಗಳನ್ನು ಅಳಿಸುವುದಕ್ಕೆ ಯುವಕರು ಮುಂದಾಗಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ಹಿಂದುತ್ವ ಉಳಿಯಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅಮೃತಾನಂದ ಸ್ವಾಮೀಜಿ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಹಿಂದುತ್ವದ ಕಿಚ್ಚು ಭಾರತಿಯ ಯುವಕರಲ್ಲಿ ಹೆಚ್ಚಿಸಿದೆ ಎಂದರು.

ಕಾರ್ಯಕ್ರಮದ ಚಾಲನೆಯನ್ನು ಸ್ನೇಹಾ ಸಂದೀಪ ಕಟಗೆ ಹಲಿಗೆ ಬಾರಿಸುವ ಮೂಲಕ ಚಾಲನೆ ನೀಡಿದರು.

ಉಮೇಶ ವಂದಾಲ, ಬಸಯ್ಯ ಹಿರೇಮಠ, ಪ್ರಕಾಶ ಬಗಲಿ, ಭೀಮಾಶಂಕರ ಹದನೂರ, ಅಡಿವೆಪ್ಪ ಸಾಲಗಲ್, ವಿವೇಕ ಹರಕಾರಿ, ರಾಹುಲ್‌ ಜಾಧವ, ಅರುಣ ಹುಂಡೇಕಾರ, ಅಂಬುಲಾಲ ರಾಠೋಡ, ಗೋಪಾಲ ಪೂಜಾರಿ, ಶಿವಾನಂದ ಭುಯ್ಯಾರ, ಶರಣು ಸಬರದ, ಜಗದೀಶ ಬೋಳಸೂರ, ಮಂಗಲಾ, ಚವ್ಹಾಣ, ಗಿರೀಜಾ ವಂದಾಲ, ಅನಿತಾ, ರಾಜಲಕ್ಷ್ಮಿ ಪರವತನವರಕಾರ್ಯಕ್ರಮದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.