ADVERTISEMENT

ಹಲಸಂಗಿ ಗೆಳೆಯರ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ

ಪ್ರಶಸ್ತಿ ಪುರಸ್ಕೃತ ಚೆನ್ನವೀರ ಕಣವಿ, ಪ್ರೊ.ಷ.ಶೆಟ್ಟರ ಸಮಾರಂಭಕ್ಕೆ ಗೈರು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 14:25 IST
Last Updated 31 ಮಾರ್ಚ್ 2019, 14:25 IST
ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ಭಾನುವಾರ ನಡೆದ ಸಮಾರಂಭದಲ್ಲಿ 2017, 2018ನೇ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತುಪ್ರಜಾವಾಣಿ ಚಿತ್ರ
ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ಭಾನುವಾರ ನಡೆದ ಸಮಾರಂಭದಲ್ಲಿ 2017, 2018ನೇ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತುಪ್ರಜಾವಾಣಿ ಚಿತ್ರ   

ವಿಜಯಪುರ:ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ, ಭಾನುವಾರ ನಗರದಲ್ಲಿ ನಡೆದ ಸಮಾರಂಭದಲ್ಲಿ 2017, 2018ನೇ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

2017ನೇ ಸಾಲಿನ ಕಾವ್ಯ ಕ್ಷೇತ್ರದ ಪ್ರಶಸ್ತಿಗೆ ಪುರಸ್ಕೃತರಾಗಿದ್ದ ಧಾರವಾಡದ ಡಾ.ಚೆನ್ನವೀರ ಕಣವಿ, ಸಂಶೋಧನೆ ಕ್ಷೇತ್ರದ ಪ್ರಶಸ್ತಿಗೆ ಭಾಜನರಾಗಿದ್ದ ಬೆಂಗಳೂರಿನ ಪ್ರೊ.ಷ.ಶೆಟ್ಟರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರು ಹಾಜರಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಇದೇ ಸಾಲಿನ ಜಾನಪದ ಕ್ಷೇತ್ರದ ಪ್ರಶಸ್ತಿಯನ್ನು ಕಲಬುರ್ಗಿಯ ಡಾ.ಮ.ಗು.ಬಿರಾದಾರ ಹಾಗೂ ಯುವ ಪ್ರಶಸ್ತಿಯನ್ನು ಬೆಳಗಾವಿಯ ಪ್ರಕಾಶ ಗಿರಿಮಲ್ಲನವರ ಅವರಿಗೆ ನಿವೃತ್ತ ಐಎಎಸ್‌ ಅಧಿಕಾರಿ ಡಾ.ಶಿವಾನಂದ ಜಾಮದಾರ, ಸಾಹಿತಿ ಡಾ.ಗುರುಲಿಂಗ ಕಾಪಸೆ, ಡಾ.ಎಸ್.ಕೆ. ಕೊಪ್ಪ ಪ್ರದಾನ ಮಾಡಿದರು.

ADVERTISEMENT

2018ನೇ ಸಾಲಿನ ಕಾವ್ಯ ಕ್ಷೇತ್ರದ ಪ್ರಶಸ್ತಿಯನ್ನು ಮುಂಬಯಿಯ ಡಾ.ಜಿ.ವಿ.ಕುಲಕರ್ಣಿ, ವಿಮರ್ಶೆ–-ಸಂಶೋಧನೆ ಕ್ಷೇತ್ರದಿಂದ ಧಾರವಾಡದ ಡಾ.ವೀರಣ್ಣ ರಾಜೂರ, ಜಾನಪದ ಕ್ಷೇತ್ರದಲ್ಲಿ ಮೈಸೂರಿನ ಡಾ.ಪಿ.ಕೆ. ರಾಜಶೇಖರ ಹಾಗೂ ಯುವ ಪ್ರಶಸ್ತಿಯನ್ನು ಬೆಂಗಳೂರಿನ ಮಂಜುಳಾ ಹುಲಕುಂಟೆ ಅವರಿಗೆ ನೀಡಲಾಯಿತು.

ಪ್ರತಿಷ್ಠಾನದ ಆರು ಪ್ರಶಸ್ತಿಗಳು ₹ 51,000 ನಗದು, ಪ್ರಶಸ್ತಿ ಪತ್ರ ಒಳಗೊಂಡಿದ್ದರೆ, ಯುವ ಪ್ರಶಸ್ತಿಯು ₹ 25,000 ನಗದು, ಪ್ರಶಸ್ತಿ ಪತ್ರ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.