ವಿಜಯಪುರ: ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರವನ್ನು ಹುಬ್ಬಳ್ಳಿಯ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್‌ನ ತಜ್ಞವೈದ್ಯ ಡಾ.ಶ್ರೀಕಾಂತ ರವಿಚಂದ್ರನ ಉದ್ಘಾಟಿಸಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಸ್ತ್ರೀ ಮತ್ತು ಪ್ರಸೂತಿ ಚಿಕಿತ್ಸಾ, ಶಸ್ತ್ರಚಿಕಿತ್ಸಾ ಹಾಗೂ ಕಿವಿ, ಮೂಗು, ಗಂಟಲು ವಿಭಾಗ ಹಾಗೂ ಹುಬ್ಬಳ್ಳಿಯ ಎಚ್.ಸಿ.ಜಿ ಕ್ಯಾನ್ಸರ್ ಸೆಂಟರ್ ಸಹಯೋಗದಲ್ಲಿ ಶಿಬಿರ ನಡೆಯಿತು.
ಶಿಬಿರದಲ್ಲಿ 100ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ನಡೆಸಲಾಯಿತು. ಇವರಲ್ಲಿ 56 ಜನರಿಗೆ ಮೆಮೊಗ್ರಾಫಿ, 50 ಜನರಿಗೆ ಪ್ಯಾಪ್ ಸ್ಕಿಯರ್ ತಪಾಸಣೆ ನಡೆಸಲಾಯಿತು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಶಸ್ತ್ರಚಿಕಿತ್ಸೆ ವಿಭಾಗದ ಡಾ. ವಿಜಯಾ ಪಾಟೀಲ, ಡಾ. ಸಂಜೀವ ರಾಠೋಡ, ಡಾ. ಶೈಲೇಶ ಕನ್ನೂರ, ಸ್ತ್ರಿರೋಗ ಮತ್ತು ಪ್ರಸೂತಿ ವಿಭಾಗದ ಡಾ. ರಾಜಶ್ರೀ ಯಳಿವಾಳ, ಡಾ. ಎಸ್. ಆರ್. ಮುದನೂರ, ಕಿವಿ, ಮೂಗು ಹಾಗೂ ಗಂಟಲು ವಿಭಾಗದ ಡಾ. ಶಿವಶಂಕರ ಅಜೂರ, ಆ.ಎಂ.ಒ. ಡಾ. ಅಶೋಕ ತರಡಿ, ವೈದ್ಯರ ತಂಡ ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.