ನಿಡಗುಂದಿ: ಪಟ್ಟಣದಲ್ಲಿ ಮಂಗಳವಾರ ನಾನಾ ಕಡೆ ಹೋಳಿ ಹಬ್ಬದ ಪ್ರಯುಕ್ತ ಮಂಗಳವಾರ ಬಣ್ಣದಾಟ ಆಚರಿಸಲಾಯಿತು.
ಮನೆಯವರೆಲ್ಲ ಪ್ರೀತಿಪಾತ್ರರಿಗೆ ಬಣ್ಣ ಎರಚಿ ಪರಸ್ಪರ ಶುಭಾಶಯ ಕೋರಿದರು. ಯುವಕರು ಹಲಿಗಿ ನಾದಕ್ಕೆ ಹೆಜ್ಜೆಹಾಕಿದರು. ಸ್ನೇಹಿತರ ಮನೆಗೆ ತೆರಳಿ ಬಣ್ಣದಲ್ಲಿ ಮುಳುಗಿಸಿ ಬಣ್ಣದಾಟಕ್ಕೆ ಕರೆತಂದರು. ಮಕ್ಕಳು ಪಿಚಕಾರಿಗಳನ್ನು ಹಿಡಿದು ರಸ್ತೆಯಲ್ಲಿ ಹೋಗಿ ಬರುವವರ ಮೇಲೆ ಬಣ್ಣದ ನೀರು ಎರಚಿ ಕುಣಿದಾಡಿದರು.
ನಿಡಗುಂದಿ ಪಟ್ಟಣದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 12ರ ವರೆಗೆ ಯುವಕ ಯುವತಿಯರು ಬಣ್ಣದಾಟದಲ್ಲಿ ಮಿಂದೆದ್ದರು. ಪಟ್ಟಣದ ರಸ್ತೆಯಲ್ಲಿ ಬಣ್ಣದ ಬ್ಯಾರೆಲ್‌ಗಳನ್ನು ತುಂಬಿದ ಟ್ರ‍್ಯಾಕ್ಟರ್‌ಗಳು ಸಂಭ್ರಮದ ಕಳೆ ಕಟ್ಟಿದವು.
ಮಧ್ಯಾಹ್ನದ ಹೊತ್ತಿಗೆ ಬಣ್ಣದಾಟ ಪೂರ್ಣಗೊಂಡಿತು. ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.